ಶಿಕ್ಷಣ

ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ELC ಕ್ಲಬ್ ನಿಂದ ಗ್ರಾಮ ಪಂಚಾಯತ್ ಭೇಟಿ

Views: 208

ಕನ್ನಡ ಕರಾವಳಿ ಸುದ್ದಿ : ಭವಿಷ್ಯದ ಹೊಸ ಮತದಾರರಿಗಾಗಿ ರೂಪುಗೊಂಡಿರುವ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ಚುನಾವಣಾ ಸಾಕ್ಷರತಾ ಕ್ಲಬ್ ತರಗತಿ ಆಧಾರಿತ ಚಟುವಟಿಕೆಯಡಿ ಶಂಕರನಾರಾಯಣ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಚುನಾವಣಾ ಹಕ್ಕುಗಳ ಬಗ್ಗೆ ಅರಿವು, ಮತದಾನದ ಪ್ರಕ್ರಿಯೆ, ಸಮಾಜದಲ್ಲಿ ಮತ ಹಕ್ಕು ಜಾಗೃತಿಯನ್ನು ಉತ್ತೇಜಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಉಮೇಶ್ ಶೆಟ್ಟಿ, ಕಲ್ಗದ್ದೆ, ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶ್ವೇತಲತಾ ಎಚ್ ಜಿ, ಕಾರ್ಯದರ್ಶಿ ಶ್ರೀ ನಾಗೇಶ್ ಬಿ ಮತ್ತು ಸಿಬ್ಬಂದಿಗಳು, ಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ನೋಡೆಲ್ ಶಿಕ್ಷಕರಾದ ಉಮೇಶ್ ಶೆಟ್ಟಿ ಮತ್ತು ರೇಷ್ಮಾ ಡಿ ರೆಬೆಲ್ಲೋ,ಶಿಕ್ಷಕಿ ಬೇಬಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button
error: Content is protected !!