ರಾಜಕೀಯ

ಕೊಟೇಶ್ವರದಲ್ಲಿ ಕಿರಣ್ ಕುಮಾರ್ ಕೊಡ್ಗಿಗೆ ಅಭಿನಂದನೆ, ಕಾಯ೯ಕತ೯ರಿಗೆ ಕೃತಜ್ಞತಾ ಸಭೆ

Views: 0

ಕೋಟೇಶ್ವರ : ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾಡು೯ಗಳಿಗೆ ಆಧ್ಯತೆ ನೀಡಿ ಗೆದ್ದಿದ್ದರೆ , ನಾವು ಅಭಿವೃದ್ದಿಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದರಿಂದಲೇ ನಮ್ಮ ಕ್ಷೇತ್ರದ ಗೆಲುವು ನಿರೀಕ್ಷೆಗಿಂತಲೂ ಜಾಸ್ತಿ ಅಂತರದ ಗೆಲುವಿಗೆ ಕಾರಣವಾಯಿತು. ಕಾಂಗ್ರೆಸ್ ಗ್ಯಾರಂಟಿ ಕಾಡಿ೯ನ ಮೂಲಕ ಆಶ್ವಾಸನೆ ನೀಡಿ ರಾಜ್ಯದಲ್ಲಿ ಬಹುಮತ ಗಳಿಸಿದ ನಂತರ , ಜನರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ಬೇಡಿಕೆಗಳನ್ನು ಈಡೇರಿಸಲಿ, ಅದು ಸಾಧ್ಯವಾಗದಿದ್ದರೆ ನಾವು ವಿರೋಧ ಪಕ್ಷದಲ್ಲಿ ಕುಳಿತು ಆಶ್ವಾಸನೆ ಈಡೇರುವ ತನಕ ನಿರಂತರ ಹೋರಾಟ ಮಾಡುತ್ತೇವೆ ಯಾರೂ ಧೃತಿಗೆಡುವ ಅಗತ್ಯವಿಲ್ಲ ಎಂದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ,

ಕ್ಷೇತ್ರಾದ್ಯಂತ ನಾನು, ಕಿರಣ್ ಕೊಡ್ಗಿ, ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ 3 ಎತ್ತುಗಳಾಗಿ, ಮತ್ತು ಕಾಯ೯ಕತ೯ರ ನಿರಂತರ ಪರಿಶ್ರಮದಿಂದಾಗಿ ಕೊಡ್ಗಿ ಅತ್ಯಧಿಕ ಬಹುಮತದಿಂದ ಗೆಲ್ಲಲು ಸಾಧ್ಯವಾಯಿತು ಎಂದರು

ಅಭಿನಂಧನೆ ಸ್ವೀಕರಿಸಿ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಕ್ಷೇತ್ರದಲ್ಲಿ ಮಾಡಿರುವ ಅತ್ಯುತ್ತಮ ಜನಪರ ಕಾರ್ಯಗಳು, ಕಾಯ೯ಕತ೯ರ ಪರಿಶ್ರಮದಿಂದ ಪ್ರಚಂಡ ಬಹುಮತದಿಂದ ನಾನು ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದರು. ಶಾಸಕನಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕೊಯ್ಲಾಡಿ ಸುರೇಶ್ ಶೆಟ್ಟಿ, ಕಾಡೂರು ಸುರೇಶ್ ಶೆಟ್ಟಿ, ಸದಾನಂದ ಬಳ್ಕೂರು, ಮಹಿಳಾ ಆಯೋಗದ ಶ್ಯಾಮಲ ಕುಂದರ್, ಮಹಿಳಾ ಮೋಚಾ೯ದ ಅನಿತಾ ಶ್ರೀಧರ್, ಮಂಡಲದ ಅಧ್ಯಕ್ಷ ಶಂಕರ ಅಂಕದ ಕಟ್ಟೆ, ಸುರೇಶ್ ಶೆಟ್ಟಿ ಗೋಪಾಡಿ , ವಕ್ವಾಡಿ ಸತೀಶ್ ಪೂಜಾರಿ ಇದ್ದರು..

Related Articles

Back to top button
error: Content is protected !!