ರಾಜಕೀಯ
ಸಂಧಾನಕ್ಕೆ ಒಪ್ಪದ ಡಿಕೆಸಿ, ಸಿದ್ದು : ಇಂದು ಹೈಕಮಾಂಡ್ ಮಹತ್ವದ ನಿಧಾ೯ರ

Views: 0
ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಗೆ ಇಬ್ಬರೂ ನಾಯಕರು ಅನಿವಾರ್ಯವಾಗಿದ್ದಾರೆ. ಆದ್ದರಿಂದ ಒಬ್ಬರ ಪರವಾಗಿ ಬ್ಯಾಟಿಂಗ್ ಮಾಡಿದರೆ ಸಮಸ್ಯೆಯಾಗುತ್ತದೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದು ರಾಹುಲ್ ಗಾಂಧಿ ಅಪೇಕ್ಷೆಯಾದರೆ, ಈ ಹಿಂದೆ ಡಿಕೆಸಿ ಅವರಿಗೆ ಮುಖ್ಯಮಂತ್ರಿ ಸ್ಥಾನದ ಭರವಸೆಯನ್ನು ಸೋನಿಯಾ ಗಾಂಧಿ ನೀಡಿದ್ದರು, ಆ ಭರವಸೆ ಈಡೇರಿಸುವ ಜವಾಬ್ದಾರಿ ಸೋನಿಯಾ ಮೇಲಿದೆ.
ಖಗೆ೯,ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಯಾರಾದರೂ ಸರಿ ಎನ್ನುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದಾರೆ.
ಮಂಗಳವಾರ ಖಗೆ೯ ನಿವಾಸದಲ್ಲಿ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಇಬ್ಬರ ವಾದಗಳನ್ನು ಆಲಿಸಿ, ಖಗೆ೯ ಇಂದು ಅಂತಿಮ ನಿಣ೯ಯ ಕೈಗೊಳ್ಳಬೇಕಾಗಿದೆ. ವಿವಾದಗಳು ತಾರಕಕ್ಕೆ ಏರಿದರೆ ಪಕ್ಷದ ಇಮೇಜಿಗೂ ಧಕ್ಕೆಯಾಗುವುದನ್ನು ತಡೆಯಲು ಇಂದು ಅಂತಿಮವಾಗಿ ಉನ್ನತ ಮಟ್ಟದ ಸಭೆ ನಡೆಸಿ, ಚಚಿ೯ಸಿದ ಬಳಿಕ ಮಹತ್ವದ ನಿಣ೯ಯ ಘೋಷಿಸುವ ಸಾಧ್ಯತೆಗಳಿವೆ.






