ರಾಜಕೀಯ

ಹೈಕಮಾಂಡ್ ‘ರಾಜಿ ಸಂಧಾನ’ ಬಳಿಕ ಮುಖ್ಯಮಂತ್ರಿ ಆಯ್ಕೆ

Views: 1

ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಮ್ಮ ಪಟ್ಟು ಸಡಿಲಿಸದೆ ಇರುವುದರಿಂದ ಮುಖ್ಯಮಂತ್ರಿ ಆಯ್ಕೆ ಬಗೆಹರಿಯದೆ ಕಗ್ಗಂಟಾಗಿ ಉಳಿದಿದೆ.

ಸೋಮವಾರ ರಾಜೀ ಸಂಧಾನಕ್ಕಾಗಿ ಡಿಕೆಸಿ ಹಾಗೂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುಲಾವ್ ನೀಡಿತ್ತು, ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ಡಿಲ್ಲಿಗೆ ತೆರಳಿದ್ದಾರೆ. ಡಿಕೆಸಿ ಮಾತ್ರ ತಮ್ಮ ಹುಟ್ಟು ಹಬ್ಬದ ನೆಪವೊಡ್ಡಿ ಡಿಲ್ಲಿಗೆ ಹೋಗಿಲ್ಲ, ಸಿದ್ದರಾಮಯ್ಯ ಮಾತ್ರ ನನಗೆ 135 ಶಾಸಕರ ಬೆಂಬಲವಿದೆ ನನಗೆ ಸಿಎಂ ನೀಡಿ ಎಂದು ವರಿಷ್ಠರ ಮನವೊಲಿಸುವ ತಂತ್ರಗಾರಿಕೆ ಮಾಡಿದ್ದಾರೆ.

ಡಿಕೆಸಿ ಬೆಂಗಳೂರಿನಲ್ಲಿ ಇದ್ದುಕೊಂಡು ಸುದ್ಧಿಗಾರರೊಂದಿಗೆ ಮಾತನಾಡಿ, ನನ್ನ ಬಳಿ ಶಾಸಕರು ಇಲ್ಲ, ನಾನು ಶಾಸಕರನ್ನು ಡಿಲ್ಲಿಗೆ ಕರೆದೊಯ್ಯುದಿಲ್ಲ ನನ್ನ ಜೊತೆ ಕಾಂಗ್ರೆಸ್ ನ 135 ಶಾಸಕರು ಇದ್ದಾರೆ ಎಂದು ಭಾವಿಸಿದ್ದೇನೆ . ಮುಖ್ಯಮಂತ್ರಿ ಹುದ್ದೆಗೆ ಹೈಕಮಾಂಡ್ ನಿರೀಕ್ಷೆಯಲ್ಲಿದ್ದೇನೆ ಎಂದರು.

ಇಂದು ಡಿಕೆಸಿ, ಸಿದ್ದರಾಮಯ್ಯ ಸಮ್ಮುಖದಲ್ಲಿ ಸಿಎಂ ಹುದ್ದೆ ತೀಮಾ೯ನವಾಗುವ ಸಾಧ್ಯತೆಗಳಿವೆ.

Related Articles

Back to top button
error: Content is protected !!