ಶಿಕ್ಷಣ

ಪ್ರತಿಭಾ ಕಾರಂಜಿಯಲ್ಲಿ ಅಮೋಘ ಸಾಧನೆ ಮೆರೆದ ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿಗಳು

Views: 1035

ಕನ್ನಡ ಕರಾವಳಿ ಸುದ್ದಿ :ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮೆರೆದು, 7 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕ್ರಮವಾಗಿ,ಕನ್ನಡ ಭಾಷಣ ಸ್ಪರ್ಧೆಯಲ್ಲಿ ಶ್ರುತಿಕಾ ಶೆಟ್ಟಿ ಪ್ರಥಮ ಸ್ಥಾನ,

ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ರಕ್ಷಿತಾ ಭಟ್ ಪ್ರಥಮ ಸ್ಥಾನ,

ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಸ್ಮೃತಿಕಾ ಪ್ರಥಮ ಸ್ಥಾನ, ಸಂಸ್ಕ್ರತ ಭಾಷಣ-ಪ್ರಥಮ್ ಜಿ. ಪ್ರಥಮ ಸ್ಥಾನ, ಭರತನಾಟ್ಯ-ವೈಷ್ಣವಿ ಪ್ರಥಮ ಸ್ಥಾನ,ಸಂಸ್ಕ್ರತ ಧಾರ್ಮಿಕ ಪಠಣ-ಅವನಿ ಭಟ್ ಪ್ರಥಮ ಸ್ಥಾನ,ಭಾವಗೀತೆ- ಜಯಶ್ರೀ ಪ್ರಥಮ ಸ್ಥಾನ.ಪಡೆದು, ಗಝಲ್- ಶ್ರೀ ರಾಮ್ ಭಟ್ ದ್ವಿತಿಯ ಸ್ಥಾನ,

ಕವ್ವಾಲಿ(ಗುಂಪು ಸ್ಪರ್ಧೆ)ರಿಷಿಕಾ,ದಿತ್ಯಾ,ದೀಕ್ಷಾ,ನಿರೀಕ್ಷಾ,ನಿಶಾಂತ್ ಕಿಣಿ,ಮಂದಿರ್ ತೃತೀಯ ಸ್ಥಾನ ಪಡೆದಿರುತ್ತಾರೆ.

ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Related Articles

Back to top button
error: Content is protected !!