ನೋಟಾ’ ಕ್ಕಿಂತಲೂ ಕಡಿಮೆ ಮತ ಪಡೆದ ಅಭ್ಯಥಿ೯ಗಳು

Views: 0
ಕನಾ೯ಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಈ ಭಾರಿ 2.6 ಲಕ್ಷ ಮತದಾರರು ನೋಟಾ ಆಯ್ಕೆಗೆ ಮತದಾನ ಮಾಡಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಏನಿದು ನೋಟಾ..? NOTA.. ಎಂದರೆ ಮೇಲಿನ ಯಾರು ಅಲ್ಲ ( None of the above) ಮೇಲಿನ ಯಾರೊಬ್ಬರು ಮತ ಪಡೆಯಲು ಅಹ೯ರಲ್ಲ ಎಂದು ಮತ ಯುಂತ್ರದಲ್ಲಿ ಈ ಆಯ್ಕೆ ಕೊನೆಯಲ್ಲಿ ಇರುತ್ತದೆ. ಈ ಮತಕ್ಕೆ ಸಿಂಧುತ್ವ ಇಲ್ಲ, ಕಣದಲ್ಲಿರುವ ಅಭ್ಯಥಿ೯ಗಳ ವಿರುದ್ಧ ಅಸಮಧಾನ ಹೊರಹಾಕಲು ಇದೊಂದು ಪ್ರಬಲ ಅಸ್ತೃವಾಗಿದೆ.
ಒಟ್ಟು ಮತದಾನದಲ್ಲಿ ಶೇ. 0.7 ರಷ್ಟು ಮಂದಿ ಅಂದರೆ 2,59,278 ಮಂದಿ ನೋಟಾವನ್ನು ಆಯ್ಕೆ ಮಾಡಿದ್ದಾರೆ. ಈ ಭಾರಿ ವಿಶೇಷವೆಂದರೆ ಚುನಾವಣೆಯಲ್ಲಿ ಸ್ಪರ್ಧಿಸಿದ ಕೆಲವು ರಾಷ್ಟ್ರೀಯ ಪಕ್ಷಗಳು ನೋಟಾ ಕ್ಕಿಂತಲೂ ಕಡಿಮೆ ಮತ ಪಡೆದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನೋಟಾ ಮತದಾನ
ಜಿಲ್ಲೆಯಲ್ಲಿ ಒಟ್ಟು 5 ವಿಧಾನ ಸಭಾ ಕ್ಷೇತ್ರಗಳಲ್ಲಿ 5,391 ನೋಟಾ ಮತ ಚಲಾವಣೆಯಾಗಿದೆ.
ಉಡುಪಿ – 1,298, ಕುಂದಾಪುರ – 1,199, ಕಾಕ೯ಳ-915, ಕಾಪು- 798, ಬೈಂದೂರು -1,208 ನೋಟಾ ಚಲಾವಣೆಯಾಗಿದೆ.
ಆಮ್ ಅದ್ಮಿ, ಜನತಾ ದಳ, ಉತ್ತಮ ಪ್ರಜಾಕೀಯ, ಕನಾ೯ಟಕ ರಾಷ್ಟ್ರ ಸಮಿತಿ, ರಿಪಬ್ಲಿಕ್ ಇನ್ ಪಾಟಿ೯ ಆಫ್ ಇಂಡಿಯಾ, ರಾಷ್ಟ್ರೀಯ ಸಮಾಜದಳ ಹಾಗೂ ಸ್ವತಂತ್ರ ಅಭ್ಯಥಿ೯ಗಳು ನೋಟಾ ಕ್ಕಿಂತಲೂ ಕಡಿಮೆ ಮತ ಚಲಾವಣೆಯಾಗಿದೆ.






