ರಾಜಕೀಯ

ಗೆಲ್ಲುವ ಅಭ್ಯಥಿ೯ಗಳು ಕೂಡಲೆ ಬೆಂಗಳೂರಿಗೆ ಬನ್ನಿ : ಡಿಕೆಸಿ

Views: 0

ನಾಳೆ ಮತ ಎಣಿಕೆ ಮುಗಿದು ಪಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಗೆದ್ದ ಅಭ್ಯಥಿ೯ಗಳಿಗೆ ಹೆಚ್ಚು ಸಮಯ ವ್ಯಯಮಾಡದೆ ಕೂಡಲೇ ಬೆಂಗಳೂರಿಗೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ ಸೂಚನೆ ನೀಡಿದ್ದಾರೆ.

ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಮಿಷ ಅಥವಾ ಬೆದರಿಕೆ ಒಡ್ಡಿ ಅವರನ್ನು ತನ್ನತ್ತ ಸೆಳೆದು ಬೆಂಬಲ ಗಿಟ್ಟಿಸಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡಬಹುದು ಎಂಬ ಅಭಿಪ್ರಾಯಕ್ಕೆ ರೆಸಾರ್ಟ್ ರಾಜಕಾರಣಕ್ಕೆ ಮುನ್ನುಡಿ ದೊರೆತಿದೆ.

ಚುನಾವಣಾ ಪೂವ೯ ಹಾಗೂ ಮತಕಟ್ಟೆ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಲಿದ್ದು, ಅಧಿಕಾರಕ್ಕೆ ಬರಲಿದೆ ಎಂಬ ಮುನ್ಸೂಚನೆ ಅರಿತು ಮತ್ತು ಪ್ರಕಟವಾಗಿರುವ ಸಮೀಕ್ಷೆಗಳಲ್ಲಿ ಮತದಾರರ ಒಲವು ಕಾಂಗ್ರೆಸ್ ಪಕ್ಷದತ್ತ ಕಂಡು ಬಂದ ಹಿನ್ನೆಲೆ, ಹಾಗೂ ಕಾಂಗ್ರೆಸ್ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲೂ ಬಹುಮತ ಮುನ್ಸೂಚನೆ ದೊರೆತಿದ್ದರಿಂದ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ಬೆಂಬಲವಿಲ್ಲದೆ ಸ್ವಂತ ಬಲದ ಮೇಲೆ ಸರಕಾರ ರಚಿಸುತ್ತೇವೆ ಎಂಬ ಆತ್ಮ ವಿಶ್ವಾಸದಿಂದ ಡಿಕೆಸಿ ಹೇಳಿದ್ದಾರೆ.

Related Articles

Back to top button
error: Content is protected !!