ರಾಜಕೀಯ
ಅತಂತ್ರ ವಿಧಾನಸಭೆ ಹಿನ್ನಲೆ: ನಮ್ಮ ಷರತ್ತುಗಳಿಗೆ ಒಪ್ಪುವ ಪಕ್ಷದೊಂದಿಗೆ ಮೈತ್ರಿ : ಕುಮಾರ ಸ್ವಾಮಿ

Views: 0
ನಮ್ಮ ಷರತ್ತುಗಳಿಗೆ ಒಪ್ಪುವ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ದ ಎಂದು ಜೆಡಿಎಸ್ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ.
ಮೇ 10 ರಂದು ನಡೆದ ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭಗೊಳ್ಳುತ್ತಿದ್ದಂತೆ ಮೂರು ಪಕ್ಷದವರು ರಣತಂತ್ರ ರೂಪಿಸಿದ್ದಾರೆ.
ಎಕ್ಷಿಟ್ ಪೋಲ್ ಗಳು ಕಾಂಗ್ರೆಸ್ ಪರವಾದ ಪಲಿತಾಂಶ ನೀಡಿದ ಹಿನ್ನೆಲೆಯಲ್ಲಿ ಮ್ಯಾಜಿಕ್ ನಂಬರ್ 113 ಕ್ಕೆ ಕಡಿಮೆ ಸ್ಥಾನ ಬಂದರೆ ಜೊತೆ ಸೇರಿ ಸಕಾ೯ರ ರಚಿಸುವ ಸಾಧ್ಯತೆಯನ್ನು ಅರಿತು, ಕಾಂಗ್ರೆಸ್, ಬಿಜೆಪಿ ಮುಂದಿನ ಸಕಾ೯ರ ರಚನೆಗೆ ವಿವಿಧ ಕಾಯ೯ತಂತ್ರಗಳ ಬಗ್ಗೆ ಚಚಿ೯ಸಿದ್ದಾರೆ.
ಕಾಂಗ್ರೆಸ್ ಸಕಾ೯ರ ರಚಿಸಿಲು ಸಾಧ್ಯವಾದರೆ ಅಗತ್ಯತೆಗೆ ಅನುಗುಣವಾಗಿ ಆಪರೇಶನ್ ಗೆ ಹೆದರಿ ಬಿಜೆಪಿ ಶಾಸಕರನ್ನು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಜೆಪಿ ಸ್ವಂತ ಬಹುಮತದಿಂದ ಸ್ಪಷ್ಟ ಬಹುಮತ ಗಳಿಸದಿದ್ದರೂ ಸಕಾ೯ರ ರಚನೆ ಬಗ್ಗೆ ವಿಶ್ವಾಸವಿದೆ ಜೆಡಿಎಸ್ ಜೊತೆ ಕೈಜೋಡಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಹೇಳಿದ್ದಾರೆ.






