ಸ್ಪಷ್ಟ ಬಹುಮತದ ನಿರೀಕ್ಷೆಯಲ್ಲಿ ಬಿಜೆಪಿ, ಕಾಂಗ್ರೆಸ್ .ಅತಂತ್ರವಾದರೆ… ಜೆಡಿಎಸ್ ಕಿಂಗ್ ಮೇಕರ್

Views: 1
ವಿವಿಧ ಮಾಧ್ಯಮ ಸಂಸ್ಥೆಗಳ ಹೆಚ್ಚಿನ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತದೆ, ಕೆಲವೇ ಸಮೀಕ್ಷೆಯಲ್ಲಿ ಮಾತ್ರ ಬಿಜೆಪಿ ಬಹುಮತಕ್ಕೆ ಬರುತ್ತದೆ, ಉಳಿದ ಹೆಚ್ಚಿನ ಸಮೀಕ್ಷೆಯಲ್ಲಿ ಅತಂತ್ರ ಪಲಿತಾಂಶದ ವರದಿ ನಿರೀಕ್ಷೆಯಿಂದಾಗಿ ಸರಕಾರದ ರಚನೆಗೆ ತಮ್ಮದೆ ಆದ ಪ್ಲಾನ್ ಮಾಡಿಕೊಂಡಿದ್ದಾರೆ.
ಅತಂತ್ರ ಪಲಿತಾಂಶ ಬಂದರೆ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ. ಪಕ್ಷೇತರರಿಗೆ ಇನ್ನಿಲ್ಲದ ಡಿಮ್ಯಾಂಡ್ ಪಡೆದುಕೊಳ್ಳಲಿದ್ದಾರೆ.
ಒಂದು ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪಷ್ಟ ಬಹುಮತವಿಲ್ಲದೆ 3 ಅಂಕಿ ದಾಟಿದರೆ ಜೆಡಿಎಸ್ ಕದ ತಟ್ಟಬಹುದು. ಆ ನಿಟ್ಟಿನಲ್ಲಿ ಎರಡು ಪಕ್ಷದವರು ಜೆಡಿಎಸ್ ಸಂಪಕ೯ವನ್ನು ಸಾಧಿಸಿ, ಎಲ್ಲೆಲ್ಲಿ ಪಕ್ಷೇತರರು ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿ ಅವರನ್ನು ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ಆರಂಭಿಸಿದ್ದಾರೆ.
ಚುನಾವಣಾ ಪೂವ೯ದಲ್ಲಿಯೇ ಅಂತಂತ್ರ ಪಲಿತಾಂಶದ ಬಗ್ಗೆ ಸುಳಿವು ಸಿಕ್ಕಿದ್ದರಿಂದ ಮತದಾರರಿಗೆ ಭರಪೂರದ ಆಶ್ವಾಸನೆ ನೀಡಿ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿತ್ತು.
ಹೆಚ್ಚಿನ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಗೆ ಬಹುಮತ ಬರುತ್ತದೆ ಎಂಬ ಅತಂತ್ರ ವಿಧಾನಸಭೆಯ ಬಗ್ಗೆ ತಿಳಿಸಿದ್ದರೂ ಬಿಜೆಪಿ ಮಾತ್ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮತದಾನೋತ್ತರ ಸಮೀಕ್ಷೆ ಸುಳ್ಳಾಗಿ, ಸ್ವಂತ ಬಲದ ಸರಕಾರ ರಚನೆಯಿಂದಾಗಿ, ಕನಾ೯ಟಕದಲ್ಲೂ ಅದೇ ರೀತಿಯ ವಾತಾವರಣ ಸೃಷ್ಟಿ ಯಾಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ.ಒಂದು ವೇಳೆ ಅತಂತ್ರ ಪಲಿತಾಂಶ ಬಂದರೆ ಜೆಡಿಎಸ್ ಜೊತೆಗೂ ಸರಕಾರ ರಚನೆಯ ಆಶಾಭಾವನೆಯಲ್ಲಿದ್ದಾರೆ.
ಅತಂತ್ರ ಪಲಿತಾಂಶದ ಸಮೀಕ್ಷೆಯಿಂದಾಗಿ ಪಲಿತಾಂಶದ ಬಳಿಕ ಆಪರೇಶನ್ ಭಯದಿಂದ ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡು ಎಲ್ಲೆಲ್ಲಿ ಪಕ್ಷೇತರರು ಆರಿಸಿ ಬರುತ್ತಾರೆ ಎಂಬ ನೆಲೆಯಲ್ಲಿ ಅವರನ್ನು ಸೆಳೆಯುವ ಕಾಯ೯ ಆರಂಭವಾಗಿದೆ.
ಬಿಜೆಪಿ, ಕಾಂಗ್ರೆಸ್ ನವರು ಏನೇ ಆದರೂ ಸ್ಪಷ್ಟ ಬಹುಮತದ ಸರಕಾರ ರಚಿಸಲಿದ್ದೇವೆ. ಬಹುಮತ ಬರದಿದ್ದರೆ ಬೆರೆಯೊಂದು ಪ್ಲಾನ್ ಸಿದ್ಧವಿದೆ ಎಂದು ನಾಯಕರು ಅಲ್ಲಲ್ಲಿ ವ್ಯಕ್ತಪಡಿಸಿದ್ದಾರೆ.
ಸಂದಿಗ್ಧ ಪರಿಸ್ಥಿತಿ ನಿಮಾ೯ಣವಾದರೆ ಸಂವಿಧಾನ ಬದ್ಧ ನಿಣ೯ಯ ತೆಗೆದುಕೊಳ್ಳಲು ರಾಜ್ಯಪಾಲರ ನಿಣ೯ಯ ಬಹುಮುಖ್ಯವಾಗಿರುತ್ತದೆ.
ಸ್ವಂತ ಬಲದ ಸಕಾ೯ರ ರಚನೆಯಾದರೆ ಜನರಿಗೆ ನೀಡಿದ ಚುನಾವಣಾ ಪ್ರಣಾಳಿಕೆಯ ಆಶ್ವಾಸನೆ ಈಡೇರಬಹುದು, ಅತಂತ್ರವಾಗಿ ಸಂಮಿಶ್ರ ಸರಕಾರ ರಚನೆಯಾದರೆ ಜನರಿಗೆ ನೀಡಿದ ಆಶ್ವಾಸನೆ ಹಾಗೆಯೇ ಉಳಿಯಬಹುದು.
ಕುಂದಾಪುರ ಮತ್ತು ಬೈಂದೂರು ಲೆಕ್ಕಾಚಾರ
ಕುಂದಾಪುರ ಮತ್ತು ಬೈಂದೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನವರು ಗೆಲುವಿನಲ್ಲಿ ಆಶಾಭಾವನೆಯಲ್ಲಿದ್ದಾರೆ.
ಬೈಂದೂರಿನಲ್ಲಿ ಚುನಾವಣಾ ಪೂವ೯ದಲ್ಲಿ ಗೋಪಾಲ ಪೂಜಾರಿ ಅವರು ಕಳೆದ ಚುನಾವಣೆಯಲ್ಲಿ ಸೋತಿದ್ದರಿಂದ ಅನುಕಂಪದ ಅಲೆ ಸೃಷ್ಟಿಯಾಗಿದ್ದು, ಚುನಾವಣೆ ಹತ್ತಿರ ಬಂದಾಗ ಬಿಜೆಪಿ ಯವರು ಹೊಸಮುಖ ಪರಿಚಯ ಮತ್ತು ಬಿಜೆಪಿ ಅಲೆಯನ್ನು ರಾಷ್ಟ್ರ ನಾಯಕರ ಮೂಲಕ ಸೃಷ್ಟಿಸಿದ್ದರಿಂದ ಅದು ಎಷ್ಟರಮಟ್ಟಿಗಿನ ಯಶಸ್ಸು ಸಾಧಿಸುತ್ತದೆ ಎಂದು ಕಾದು ನೋಡಬೇಕಾಗಿದೆ.
ಕುಂದಾಪುರದಲ್ಲಿ ಪಕ್ಷಕ್ಕಿಂತ ಮುಖ್ಯವಾಗಿ ಶ್ರೀನಿವಾಸ ಶೆಟ್ಟಿ ಅವರ ವಚ೯ಸ್ಸಿನಿಂದ ಗೆಲ್ಲುತ್ತಾ ಬಂದಿದೆ. ಆದರೆ ಈ ಭಾರಿ ಪಕ್ಷಕ್ಕಿಂತ ಮುಖ್ಯ ವಾಗಿ ಜಾತಿ ಆಧಾರಿತ ಮತಗಳಿಂದ ಗೆಲುವು ನಿಣಾ೯ಯಕವಾಗಲಿದೆ.
ಈಗ ಬಂದಿರುವುದು ಪಲಿತಾಂಶ ಅಲ್ಲ ಕೇವಲ ಸಮೀಕ್ಷೆ ಮಾತ್ರ, ಮೇ 13 ರಂದು ಬರಲಿರುವ ಪಲಿತಾಂಶದಲ್ಲಿ ಎಲ್ಲರ ಭವಿಷ್ಯವನ್ನು ಕಾದು ನೋಡಬೇಕಾಗಿದೆ






