80 ವಷ೯ ಮೇಲ್ಪಟ್ಟ ಹಾಗೂ ಅಂಗವಿಕಲರ ಮತದಾನ ಶೇ. 97

Views: 0
ಉಡುಪಿ ಜಿಲ್ಲೆಯಾದ್ಯಂತ 80 ವಷ೯ ಹಾಗೂ ಅಂಗವಿಕಲರ ಮತದಾನಕ್ಕೆ ಹೆಚ್ಚಿನ ಒಲವು ತೋರಿದ್ದರಿಂದ ಒಟ್ಟು ಶೇ. 97 ರಷ್ಟು ಮತ ಚಲಾವಣೆಯಾಗಿದೆ.
ಬೈಂದೂರು, ಕಾಕ೯ಳ , ಕುಂದಾಪುರದಲ್ಲಿ ಶೇ. 98 ರಷ್ಟು ಮತಚಲಾವಣೆಯಾಗಿದೆ. ಉಡುಪಿ ಕಾಪುವಿನಲ್ಲಿ ಶೇ. 97 ಮತದಾನವಾಗಿದೆ.
ನಾನಾ ಕಾರಣಗಳಿಂದ ಬೈಂದೂರಿನಲ್ಲಿ 30, ಕುಂದಾಪುರದಲ್ಲಿ 23, ಉಡುಪಿ 28 ,ಕಾಪು 18,ಕಾಕ೯ಳದಲ್ಲಿ 25 ಮಂದಿ ಮತ ಚಲಾಯಿಸಲಿಲ್ಲ.
ಒಂದೊಂದು ಮತಕ್ಕೂ ಮೌಲ್ಯವಿರುವುದರಿಂದ ನಿಲ೯ಕ್ಷ ಮಾಡುವಂತಿಲ್ಲ ಆ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷದವರು ಪ್ರತಿ ಮನೆ ಮನೆಗೆ ತೆರಳಿ ಉದ್ಯೋಗ, ನಾನಾ ಕಾರಣಗಳಿಂದ ಮನೆಯಿಂದ ಹೊರಗಿದ್ದವರ ಮಾಹಿತಿ ಪಡೆದು, ಅವರ ಸಂಪಕ೯ ಸಂಖ್ಯೆಯನ್ನು ಪಡೆದು ಕರೆಮಾಡಿ ಮತಚಲಾಯಿಸುವಂತೆ ವಿನಂತಿ ಮಾಡುವ ಕಾಯ೯ತಂತ್ರ ನಡೆಯುತ್ತಿದೆ. ಮತದಾನ ದಿನ ಕ್ಷೇತ್ರಕ್ಕೆ ಆಗಮಿಸಲು ವಾಹನದ ವ್ಯವಸ್ಥೆ ಕಲ್ಪಿಸಲು ಕಾಯ೯ಕತ೯ರನ್ನು ನೇಮಿಸಿದ್ದಾರೆ.
ಮತದಾನಕ್ಕೆ ಕೇವಲ 2 ದಿನ ಉಳಿದಿದ್ದು, ಕೆಲವಡೆ ಮತದಾನದ ಬಹಿಷ್ಕಾರ ಕೂಗು ಕೇಳಿ ಬಂದಿದೆ ಕ್ಷೇತ್ರದ ಅಲ್ಲಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರು ಇನ್ನಿತರ ಸೌಲಭ್ಯಗಳಿಂದ ವಂಚಿತರಾದವರು, ತಮ್ಮ ನಿರ್ಧಾರವನ್ನು ರಾಜಕೀಯ ಪಕ್ಷಗಳು ಮತ್ತು ಅಧಿಕಾರಿಗಳ ಗಮನ ಸೆಳೆಯಲು ಬಹಿಷ್ಕಾರದ ಬ್ಯಾನರ್ ಅಲ್ಲಲ್ಲಿ ಕಂಡು ಬಂದಿದೆ.
ಮೇ. 8 ಸಂಜೆ 6 ರಿಂದ ಮೇ. 10 ವರೆಗೆ ಮತದಾನ ಅವಧಿಯ ‘ಸೈಲೆಂಟ್ ಪಿರಿಯಡ್’ ನಲ್ಲಿ 144 ಸೆಕ್ಷನ್ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 5 ಕ್ಕಿಂತ ಹೆಚ್ಚು ಮಂದಿ ಗುಂಪು ಸೇರಿ ಪ್ರತಿಸ್ಪಧಿ೯ಗಳ ವಿರುದ್ಧ ಟೀಕೆ, ದ್ವೇಷದ ಮಾತು, ಧಾರ್ಮಿಕ ಭಾವನೆ ಕೆರಳಿಸುವ ಮಾತುಗಳಿಗೆ ನಿಬ೯ಂಧ ಹೇರಲಾಗಿದೆ.






