ಬಿಸಿಗಾಳಿ ತಡೆಯಲು ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳು

Views: 0
ಪ್ರಸಕ್ತ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಇದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಆಗುವ ಹಾನಿ, ಅಪಾಯವನ್ನು ತಪ್ಪಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
~ ಮಧ್ಯಾಹ್ನ 12 ರಿಂದ 3ರ ವರೆಗಿನ ಗರಿಷ್ಠ ಬಿಸಿಲಿನ ಓಡಾಟ ಕಡಿಮೆ ಮಾಡಬೇಕು.
~ ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು, ಹಗುರ, ತಿಳಿ ಬಣ್ಣದ ಸಡಿಲ, ಹತ್ತಿ ಬಟ್ಟೆಗಳನ್ನು ಧರಿಸಬೇಕು.
~ ಉಷ್ಣತೆ ಜಾಸ್ತಿ ಇರುವಾಗ ಶ್ರಮದಾಯಕ ಚಟುವಟಿಗಳನ್ನು ಮಾಡಬಾರದು.
~ ದೇಹವನ್ನು ನಿಜ೯ಲೀಕರಣಗೊಳಿಸುವ ಚಹಾ, ಕಾಫಿ ಮತ್ತು ಕಾಬೋ೯ನೇಟ್ ಪಾನೀಯ ಸೇವಿಸಬಾರದು.
~ ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಬಿಡಬಾರದು.
~ ಬಿಸಿಲಿಗೆ ಕನ್ನಡಕ, ಛತ್ರಿ, ಟೋಪಿ, ಬೂಟು, ಚಪ್ಪಲಿ ಬಳಕೆ ಮಾಡಬೇಕು.
~ಬಿಸಿ ಆಹಾರ ಸೇವಿಸಬಾರದು.ಇದರಿಂದ ನಿಜ೯ಲೀಕರಣ, ಶಾಖ ಸೆಳೆತ, ಶಾಖದ ಬಳಲಿಕೆ ಮತ್ತು ಸನ್ ಸ್ಟ್ರೋಕ್ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಮುನ್ನೆಚ್ಚರಿಕೆ ಕ್ರಮಗಳು
ಬಿಸಿಗಾಳಿಗೆ ತುತ್ತಾಗಿ ಅಸ್ವಸ್ಥರಾದರೆ ಅವರನ್ನು ನೆರಳಿಗೆ ಸ್ಥಳಾಂತರಿಸಿ ನೀರು, ತಂಪು ಗಾಳಿಯ ವ್ಯವಸ್ಥೆ ಮಾಡಬೇಕು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಸಂಪಕಿ೯ಸಿ, ಚಿಕಿತ್ಸೆ ಕೊಡಬೇಕು .ಬಿಸಿಗಾಳಿಗೆ ತುತ್ತಾದವರ ಮೇಲೆ ತಂಪಾದ ಒದ್ದೆ ಬಟ್ಟೆಯನ್ನು ಹಾಕುವ ಮೂಲಕ ವ್ಯಕ್ತಿಯನ್ನು ತಂಪಾಗಿರಿಸಬೇಕು.






