ಶಿಕ್ಷಣ

ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ರೇಬಿಸ್ ರೋಗದ ಕುರಿತು ಕಾರ್ಯಾಗಾರ

Views: 102

ಶಂಕರನಾರಾಯಣ : ಜಿಲ್ಲಾ ಪಂಚಾಯತ್ ಉಡುಪಿ, ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಶಾಲೆಯಲ್ಲಿ ವಿಶ್ವ ರೇಬಿಸ್ ದಿನಾಚಾರಣೆಯ ಅಂಗವಾಗಿ ಶಂಕರನಾರಾಯಣ ಪಶು ಆಸ್ಪತ್ರೆಯ ಮುಖ್ಯಪಶುವೈದ್ಯಾಧಿಕಾರಿಗಳಾದ ಡಾll ಅರುಣ್ ಕೆ ಪಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರೇಬಿಸ್ ಕಾಯಿಲೆಯ ಕಾರಣ, ಚಿಹ್ನೆಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯ ಕುರಿತು ಹಲವು ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಿದರು 

ಪಶು ಆಸ್ಪತ್ರೆಯ ಸಿಬ್ಬಂದಿಗಳಾದ ವೀಣಾ, ಪಶುಸಖಿ ಸವಿತಾ ಮತ್ತು ಶಾಲೆಯ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು 

ಶಿಕ್ಷಕರಾದ ಜಗದೀಶ್ ಸ್ವಾಗತಿಸಿದರು. ಚೈತ್ರಾ ವಂದಿಸಿದರು. ಸಂಯೋಜಕ ಉಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button
error: Content is protected !!