ಧಾರ್ಮಿಕ
ಮಂಗಳೂರಿನಿಂದ ಅಮೆರಿಕಕ್ಕೆ ಗಣಪನ ಪ್ರಯಾಣ!

Views: 58
ಮಂಗಳೂರು: ಗಣೇಶನ ಮೂರ್ತಿಯನ್ನು ಆರಾಧಿಸಿ ನಡೆಯುವ ಈ ಹಬ್ಬಕ್ಕೆ ಗಣೇಶನ ಮೂರ್ತಿ ತಯಾರಿಸುವ ಕಲಾವಿದರ ಕೊಡುಗೆ ಅಪಾರವಾಗಿದೆ. ಮಂಗಳೂರಿನಲ್ಲಿ ಮನೆಯಲ್ಲಿ ಕಲಾವಿದರು ತಯಾರಿಸುವ ಗಣಪತಿ ಅಮೆರಿಕಕ್ಕೆ ಕಳೆದ 27 ವರ್ಷಗಳಿಂದ ಗಣೇಶನ ಮೂರ್ತಿಯನ್ನು ಇಲ್ಲಿಂದಲೇ ತಯಾರಿಸಿ ಕೊಂಡೊಯ್ಯುತ್ತಿದೆ. ಈ ಬಾರಿ ಜುಲೈನಲ್ಲಿ ಇಲ್ಲಿಂದ ಗಣೇಶನ ಮೂರ್ತಿ ಅಮೆರಿಕಾಕ್ಕೆ ಕೊಂಡೊಯ್ದಿದ್ದಾರೆ.

ಒಂದೇ ಕುಟುಂಬದ ಸದಸ್ಯರು ಹಲವು ವರ್ಷಗಳಿಂದ ಮೂರ್ತಿ ತಯಾರಿಸುತ್ತಿದ್ದು ಈ ಬಾರಿಯದ್ದು 95ನೇ ವರ್ಷವಾಗಿದೆ. ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್ ಅವರು ಆರಂಭಿಸಿದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ಇದೀಗ ನಾಲ್ಕನೇ ತಲೆಮಾರು ತೊಡಗಿಸಿಕೊಂಡು ಬಂದಿದೆ.






