ಜಾನುವಾರುಗಳಿಗೆ ಹುಲ್ಲು ನೀಡಿ ಮಾನವೀಯತೆ ಮೆರೆದ ಗೋ-ಸೇವಕರು

Views: 0
ಕುಂದಾಪುರ : ಇತ್ತೀಚೆಗೆ ವಕ್ವಾಡಿ ರಸ್ತೆ ಕುಂಭಾಸಿಯ ಸಾವಯವ ಕೃಷಿಕ ಅಶೋಕ ಶೆಟ್ಟಿಗಾರ ಅವರ ಮನೆಯಲ್ಲಿ ಗೋವುಗಳಿಗೆ ಸಂಗ್ರಹಿಸಿದ ಹುಲ್ಲಿನ ರಾಶಿಗೆ ಪೆಟ್ರೋಲ್ ಸುರಿದು ಪರಾರಿಯಾದ ಘಟನೆ ಹಿನ್ನಲೆಯಲ್ಲಿ ಗೋವುಗಳ ತುತ್ತಿಗೆ ಬೆಂಕಿ ಇಟ್ಟ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಶ್ವ ಹಿಂದು ಪರಿಷತ್ತು ಮತ್ತು ಬಜರಂಗ ದಳದ ಗೋಸೇವಕರು ಗೋವುಗಳಿಗೆ ಹುಲ್ಲನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ತಿನ ಸಹ ಕಾಯ೯ದಶಿ೯ ಸುರೇಂದ್ರ, ಭಜರಂಗದಳದ ಕಾಯ೯ಕತ೯ರು. ಮನೀಷ್ ಬೀಜಾಡಿ, ಕಾತಿ೯ಕ್ ಕೋಟೆಮನಿ, ಗೌತಮ ಇವರನ್ನು ಒಳಗೊಂಡ ತಂಡದವರು ಅಶೋಕ್ ಶೆಟ್ಟಿಗಾರ ಅವರ ಮನೆಗೆ ತೆರಳಿ 25 ಕ್ಕೂ ಹೆಚ್ಚು ಹುಲ್ಲಿನ ಕಟ್ಟು ನೀಡಿದಕ್ಕೆ ಮಾನವೀಯತೆಗೆ ಪ್ರತಿಯಾಗಿ ಮನೆಯವರು ವಂದನೆ ಸಲ್ಲಿಸಿದ್ದಾರೆ .
ಸಾಮಾಜಿಕ ಜಾಲತಾಣದಲ್ಲಿ ಶೆಟ್ಟಿಗಾರರ ಬಗ್ಗೆ ಧಾಮಿ೯ಕ ಮತ್ತು ಸಾಂಸ್ಕೃತಿಕ ಸೇವೆಯ ಮೂಲಕ ಬದುಕು ಕಟ್ಟಿಕೊಂಡು ಸಾಮಾಜಿಕವಾಗಿ ಉಪಕಾರಿಯಾದ ಶ್ರೀಯುತರಿಗೆ ನಷ್ಟ ಮತ್ತು ನೋವನ್ನು ತುಂಬಿಕೊಟ್ಟು, ಸಾಮಾಜಿಕ ದುಷ್ಟ ಶಕ್ತಿಗಳನ್ನು ಪೊಲೀಸ್ ಇಲಾಖೆಯು ತಕ್ಕ ಶಾಸ್ತಿಯ ಮೂಲಕ ಮಟ್ಟ ಹಾಕುವಂತೆ ಬೆಂಬಲ ಸೂಚಿಸಿದ್ದಾರೆ.
ಸಂತೃಸ್ತರು ಕುಂದಾಪುರ ಠಾಣೆಗೆ ನೀಡಿದ ದೂರಿನ ಹಿನ್ನಲೆಯಲ್ಲಿ ಕುಂದಾಪುರ ಠಾಣಾಧಿಕಾರಿಗಳಾದ ಪ್ರಸಾದ್, ನಂದ ಕುಮಾರ್ ಮತ್ತು ತಂಡದವರು ಘಟನಾ ಸ್ಥಳಕ್ಕೆ ಬೇಟಿ ನೀಡಿ, ಸಮಗ್ರವಾಗಿ ತನಿಖೆ ನಡೆಸಿ ಅಪರಾದಿಗಳನ್ನು ಶೀಘ್ರವಾಗಿ ಬಂಧಿಸಿ, ಕಠಿಣವಾದ ಶಿಕ್ಷೆಗೆ ಒಳಪಡಿಸಲಾಗುವುದೆಂಬ ಭರವಸೆ ನೀಡಿದ್ದಾರೆ.






