ಬ್ರಹ್ಮಾವರ ಸರಕಾರಿ ಪ.ಪೂ ಕಾಲೇಜು:ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಮಾಜಿ ಸೈನಿಕರಿಗೆ ಸನ್ಮಾನ

Views: 73
ಬ್ರಹ್ಮಾವರ: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ 24 ಮಂದಿ ಸೈನಿಕರನ್ನು ಸೇರಿ ಒಟ್ಟು 45 ಮಾಜಿ ಸೈನಿಕರಿಗೆ ಗೌರವ ಸಮರ್ಪಣೆಯ ಕಾರ್ಯಕ್ರಮ ಜುಲೈ 26ರಂದು ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜು, ಎನ್ ಎಸ್ ಎಸ್ ವಿಭಾಗ, ಜಿಲ್ಲಾ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ನಡೆಯಿತು.
ಕಾರ್ಗಿಲ್ ಯುದ್ಧ ಹಾಗೂ ಬೇರೆ ಬೇರೆ ಯುದ್ಧದಲ್ಲಿ ಪಾಲ್ಗೊಂಡು ಅಭೂತಪೂರ್ವ ಗೆಲುವಿಗೆ ಕಾರಣೀಕರ್ತರಾದ ವೀರಯೋಧರನ್ನು ಸನ್ಮಾನಿಸಲಾಯಿತು.
ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷಗಳಾಗಿದ್ದು, ಇಷ್ಟೊಂದು ಸೈನಿಕರನ್ನು ಒಂದೇ ವೇದಿಕೆಯಲ್ಲಿ ಗುರುತಿಸಿರುವುದು ಜಿಲ್ಲೆಯಲ್ಲಿಯೇ ಪ್ರಥಮ ಕಾರ್ಯಕ್ರಮವಾಗಿದೆ.
ಇದೇ ಸಂದರ್ಭದಲ್ಲಿ ಸನ್ಮಾನಗೊಂಡ ಸೈನಿಕರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ರವೀಂದ್ರ ಉಪಾಧ್ಯ, ಉಪ ಪ್ರಾಂಶುಪಾಲರಾದ ಸೀಮಾ, ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿಆರ್, ಮಾಜಿ ಸೈನಿಕ ಸಂಘದ ಅಧ್ಯಕ್ಷ ಕೇಶವ ಮಲ್ಪೆ, ಉಪಾಧ್ಯಕ್ಷ ಚಂದ್ರ ಅಮೀನ್, ರಾಜೇಶ್ ಬಿರ್ತಿ, ಪ್ರಕಾಶ್ ಕೂರಾಡಿ, ರಾಮಕೃಷ್ಣ ಹಾರಾಡಿ, ಬಾಲಕೃಷ್ಣ, ಉದಯ್ ಕುಮಾರ್, ಭಾಸ್ಕರ್ ರೈ, ನಳಿನಿ ಪ್ರದೀಪ್, ಸಂತೋಷ್ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್ ಎಸ್ ಎಸ್ ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಕಾರ್ಯಕ್ರಮ ಸಂಘಟಿಸಿದರು. ಮಾಜಿ ಸೈನಿಕ ಸುರೇಶ್ ಕುಮಾರ್ ಸನ್ಮಾನಿತರ ಪಟ್ಟಿ ವಾಚಿಸಿದರು ಇದಕ್ಕೂ ಮೊದಲು ಬ್ರಹ್ಮಾವರ ಪೇಟೆಯಲ್ಲಿ ಬೃಹತ್ ಜಾಥಾ ಜರಗಿತು.








