ರಾಜಕೀಯ

ಚುನಾವಣ ಕಣದಲ್ಲಿರುವ ಅಭ್ಯಥಿ೯ಗಳಿಗೂ ಪ್ರತಿಜ್ಞೆ ಮಾಡಿಸಿ: ಆಯೋಗಕ್ಕೆ ಪತ್ರ

Views: 0

ಕುಂದಾಪುರ :ಚುನಾವಣ ಆಯೋಗ ಕಳುಹಿಸಿರುವ ಪ್ರತಿಜ್ಞೆ ವಿಧಿಯನ್ನು ಹೆಮ್ಮೆಯಿಂದ, ಗೌರವ ಪೂವ೯ಕವಾಗಿ ಸ್ವೀಕರಿಸಿದ್ದೇವೆ, ಆದರೆ, ಚುನಾವಣ ಕಣದಲ್ಲಿರುವ ಅಭ್ಯಥಿ೯ಗಳಿಗೂ ನ್ಯಾಯ ಸಮ್ಮತವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂಬ ಪ್ರಜ್ಞೆಯನ್ನು ಮಾಡಿಸಬೇಕು ಎಂದು ತ್ರಾಸಿ ಪರಿಸರದ ಮಹಿಳೆಯರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ, ತಪ್ಪದೆ ಮತದಾನ ಮಾಡುತ್ತೇನೆ, ಯಾವುದೇ ಜಾತಿ, ಮತ, ಪಂಥ, ಭಾಷೆ ಎಂಬಿತ್ಯಾದಿ ಪ್ರೇರಣೆಗೆ ಒಳಗಾಗದೆ ನ್ಯಾಯ ಸಮ್ಮತವಾಗಿ ಚುನಾವಣೆಯಲ್ಲಿ ಮತ ಚಲಾಯಿಸುತ್ತೇವೆ. ಇದು ನಮಗಾಗಿ ಇರುವ ಪ್ರತಿಜ್ಞೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಚುನಾವಣಾ ಕಣದಲ್ಲಿರುವವರಿಗೆ ತಾವೇನು ಕ್ರಮ ಕೈಗೊಂಡಿದ್ದೀರಿ ? ಅವರಿಗಾಗಿ ಪ್ರತಿಜ್ಞೆ ವಿಧಿ ಅಥವಾ ಬೇರಾನದರೂ ವಿಧಾನ ಆಯೋಜಿಸಿದ್ದೀರಾ ? ಎಂಬ ಪ್ರಶ್ನೆಗಳಿಗೆ ಸಹಿ ಹಾಕಿದ ಪತ್ರವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ.

Related Articles

Back to top button
error: Content is protected !!