ಆರ್ಥಿಕ

3 ಲಕ್ಷ ಆದಾಯದವರಿಗೆ ಶೂನ್ಯ ತೆರಿಗೆ, 3 ಲಕ್ಷದಿಂದ 7 ಲಕ್ಷದ ವರೆಗಿನ ಆದಾಯಕ್ಕೆ ಶೇ.5 ತೆರಿಗೆ ಬಜೆಟ್ ನಲ್ಲಿ ಘೋಷಣೆ

Views: 161

ನವದೆಹಲಿ, – ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 3ನೇ ಅವಧಿಯ ಚೊಚ್ಚಲ ಬಜೆಟ್‌ನಲ್ಲಿ ತೆರಿಗೆದಾರರಿಗೆ ಸಿಹಿ ಸಿಕ್ಕಿದ್ದು, ತೆರಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡುವ ಘೋಷಣೆಯನ್ನು ವಿತ್ತ ಸಚಿವ ನಿರ್ಮಲ ಸೀತರಾಮನ್ ಬಜೆಟ್‌ನಲ್ಲಿ ಮಾಡಿದ್ದಾರೆ.

ಹೊಸ ತೆರಿಗೆ ಪದ್ಧತಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ 3 ಲಕ್ಷ ಆದಾಯದವರೆಗೆ ಶೂನ್ಯ ತೆರಿಗೆಯನ್ನು ಘೋಷಿಸಲಾಗಿದೆ.

3 ಲಕ್ಷದಿಂದ 7 ಲಕ್ಷದ ವರೆಗಿನ ಆದಾಯಕ್ಕೆ ಶೇ. 5 ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಮಾಡಲಾಗಿದೆ.

ಹಾಗೆಯೇ 7ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ. 10 ರಷ್ಟು ತೆರಿಗೆ, 10ಲಕ್ಷದಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ. 15 ರಷ್ಟು ತೆರಿಗೆ, 12ಲಕ್ಷದಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇ.20 ರಷ್ಟು ತೆರಿಗೆ. 15 ಲಕ್ಷಕ್ಕಿಂದ ಮೇಲಿನ ಆದಾಯಕ್ಕೆ ಶೇ. 30 ರಷ್ಟು ತೆರಿಗೆ ಘೋಷಿಸಿದ್ದಾರೆ.

ಹೊಸ ತೆರಿಗೆ ಪದ್ಧತಿಯಲ್ಲಿ ವೇತನದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್‌ನ್ನು 50 ಸಾವಿರದಿಂದ 75 ಸಾವಿರದವರೆಗೆ ಹಾಗೂ ಪಿಂಚಣಿದಾರರಿಗೆ 15 ಸಾವಿರದಿಂದ 20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಹೊಸ ತೆರಿಗೆ ಪದ್ದತಿಯಿಂದ ಪ್ರತಿಯೊಬ್ಬ ವೇತನದಾರರಿಗೆ ಕನಿಷ್ಠ 17500 ರೂಪಾಯಿ ಉಳಿತಾಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಹೂಡಿಕೆದಾರರಿಗೆ ಇದ್ದ ಏಂಜಲ್ಸ್ ತೆರಿಗೆಯನ್ನು ರದ್ದು ಮಾಡುವ ಘೋಷಣೆಯನ್ನು ಅವರು ಬಜೆಟ್‌ನಲ್ಲಿ ಮಾಡಿದ್ದಾರೆ.

ಸ್ಲ್ಯಾಬ್ ಆದಾಯ ತೆರಿಗೆ ವಿವರ

3ಲಕ್ಷದ ಆದಾಯಕ್ಕೆ ಶೂನ್ಯ ತೆರಿಗೆ

3 ಲಕ್ಷದಿಂದ 7 ಲಕ್ಷದವರೆಗಿನ ಆದಾಯಕ್ಕೆ ಶೇ. 5 ರಷ್ಟು ತೆರಿಗೆ

7ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ. 10 ರಷ್ಟು ತೆರಿಗೆ

10 ಲಕ್ಷದಿಂದ 12ಲಕ್ಷದವರೆಗಿನ ಆದಾಯಕ್ಕೆ ಶೇ. 15ರಷ್ಟು ತೆರಿಗೆ

12 ಲಕ್ಷದಿಂದ 15 ಲಕ್ಷದವರೆಗೆ ಶೇ.15, 20 ರಷ್ಟು ತೆರಿಗೆ ಲಕ್ಷ ಮೇಲಿನ ಆದಾಯಕ್ಕೆ ಶೇ. 3೦ ರಷ್ಟು ತೆರಿಗೆ ವಿಧಿಸಲಾಗಿದೆ.

Related Articles

Back to top button
error: Content is protected !!