ಬೈಂದೂರು ಸುಕುಮಾರ ಶೆಟ್ಟಿ ಬೆಂಬಲಿಗರಿಂದ ಆಕ್ರೋಶ

Views: 0
ಕುಂದಾಪುರ : ಬಿಜೆಪಿ ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರ ನಿವಾಸದಲ್ಲಿ ಪ್ರಮುಖ ನಾಯಕರು, ಬೆಂಬಲಿಗರು ಟಕೆಟ್ ವಿಷಯದಲ್ಲಿ ಪಕ್ಷವು ನಡೆಸಿಕೊಂಡ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಅವರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುಕುಮಾರ್ ಶೆಟ್ಟಿ ಅವರು ಮಾತನಾಡಿ, ಟಿಕೆಟ್ ಕೈತಪ್ಪಿದಕ್ಕೆ ವಿರೋಧವಿಲ್ಲ, ಬಂಡಾಯವೂ ಇಲ್ಲ, ಆದರೆ ಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡುವ ಕುರಿತು ತಮ್ಮ ಕಾಯ೯ಕತ೯ರು, ಹಿತೈಷಿಗಳೊಂದಿಗೆ ಚಚಿ೯ಸಿ ಎರಡು ದಿನದೊಳಗೆ ನಮ್ಮ ಅಭಿಪ್ರಾಯವನ್ನು ನಿಧ೯ರಿಸುತ್ತೇವೆ.
ಟಿಕೆಟ್ ಇಲ್ಲ ಎಂದು 3 ತಿಂಗಳ ಮೊದಲೇ ಹೇಳಬಹುದಿತ್ತು. ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಕರೆಮಾಡಿ ನಿಮಗೆ ಟಿಕೆಟ್ ನೀಡುವ ಬಗ್ಗೆ ನಾವು ಪ್ರಯತ್ನಿಸಿದ್ದು, ಮುಂದಿನ ದುಡುಕಿನ ನಿಧಾ೯ರ ಕೈಗೊಳ್ಳದಿರಿ ಎಂದಿದ್ದು.
ಕಳೆದ 5 ವಷ೯ ಕ್ಷೇತ್ರದಲ್ಲಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಜನ ಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂಧಿಸಿರುವ ತೃಪ್ತಿ ಇದೆ ಎಂದರು.






