ರಾಜಕೀಯ
ಬೈಂದೂರು: ಗುರುರಾಜ್ ಗಂಟಿಹೊಳೆಗೆ ಟಿಕೆಟ್

Views: 0
ಕುಂದಾಪುರ : ಬಿಜೆಪಿಯ ಪ್ರಥಮ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಕ್ಕೆ ಹೊಸಬರಿಗೆ ಟಿಕೆಟ್ ನೀಡಿದ್ದು, ಇದೀಗ 2ನೇ ಪಟ್ಟಿಯಲ್ಲಿ ಬೈಂದೂರು ಕ್ಷೇತ್ರದ ಅಭ್ಯಥಿ೯ಯಾಗಿ ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಲಾಗಿದೆ.
ಪ್ರಥಮ ಪಟ್ಟಿಯಲ್ಲಿ ಬೈಂದೂರು ಕ್ಷೇತ್ರದ ಅಭ್ಯಥಿ೯ಯನ್ನು ಪ್ರಕಟಿಸಿಲ್ಲ, ಇಲ್ಲಿ ಟಿಕೆಟ್ ಆಕಾಂಕ್ಷೆಗಳ ಬೆಂಬಲಿಗರು ಅಲ್ಲಲ್ಲಿ ತಮ್ಮ ತಮ್ಮ ಅಭ್ಯಥಿ೯ಗಳ ಪರವಾಗಿ ಅಸಮಧಾನವನ್ನು ಪ್ರತಿಭಟಿಸುವುದರ ಮೂಲಕ ವ್ಯಕ್ತಪಡಿಸಿದ್ದರು.
ಯಾರನ್ನೂ ಸಮಾಧಾನ ಪಡಿಸುವುದು ಕಷ್ಟ ಎಂಬ ನೆಲೆಯಲ್ಲಿ ಸಂಘದ ಪ್ರಚಾರಕ ಗುರುರಾಜ್ ಗಂಟಿಹೊಳೆ ಎಂಬ ಹೊಸ ಮುಖದ ಅಭ್ಯಥಿ೯ಯನ್ನು ಪರಿಚಯಿಸಲಾಗಿದೆ.






