ಉಡುಪಿ ಜಿಲ್ಲೆ : ಮೂವರು ಹೊಸಬರಿಗೆ ಟಕೆಟ್

Views: 0
ಉಡುಪಿ : ಬಿಜೆಪಿಯ ಮೊದಲ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಮೂವರು ಹೊಸಬರಿಗೆ ಟಿಕೆಟ್ ನೀಡಿ, ಮೂವರು ಹಾಲಿಗಳಿಗೆ ಕೊಕ್ ನೀಡಲಾಗಿದೆ. ಬೈಂದೂರಿನಲ್ಲಿ ಅಭ್ಯಥಿ೯ ಪ್ರಕಟ ಬಾಕಿ ಇದೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಹಿಂದೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು, ಅವರ ಇಂಗಿತದಂತೆ ಎ. ಜಿ. ಕೊಡ್ಗಿಯವರ ಪುತ್ರ ಕಿರಣ್ ಕುಮಾರ್ ಕೊಡ್ಗಿಯವರಿಗೆ ಟಕೆಟ್ ನೀಡಲಾಗಿದೆ.
ಕಾಪು ಕ್ಷೇತ್ರದಲ್ಲಿ ರಾಜ್ಯ ಬಿಜೆಪಿ ಕಾಯ೯ಕಾರಣಿ ಸದಸ್ಯ ಗುಮೆ೯ ಸುರೇಶ್ ಶೆಟ್ಟಿ ಅವರಿಗೆ ಟಿಕೆಟ್ ನೀಡಿ, ಹಾಲಿ ಶಾಸಕ ಲಾಲಾಜಿ ಮೆಂಡನ್ ರಿಗೆ ಕೊಕ್ ನೀಡಲಾಗಿದೆ.
ಉಡುಪಿ ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಒಬಿಸಿ ಮೋಚಾ೯ದ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವಣ೯ ಅವರಿಗೆ ಮೊದಲ ಬಾರಿಗೆ ಟಿಕೆಟ್ ನೀಡಿ, ಹಾಲಿ ಶಾಸಕ ರಘುಪತಿ ಭಟ್ ಅವರನ್ನು ಕೈಬಿಡಲಾಗಿದೆ.
ಕಾಕ೯ಳದಲ್ಲಿ ಮೂರು ಬಾರಿ ಪ್ರತಿನಿಧಿಸಿದ ಹಾಲಿ ಸಚಿವ, ವಿಪಕ್ಷದ ಮುಖ್ಯ ಸಚೇತಕರಾಗಿದ್ದ ಸುನೀಲ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಬೈಂದೂರಿನಲ್ಲಿ ಮಾತ್ರ ಅಭ್ಯಥಿ೯ ಪ್ರಕಟ ಬಾಕಿ ಇದ್ದು, ಇಲ್ಲಿ ಅಂತಿಮವಾಗಿ ಪ್ರಣಯ ಕುಮಾರ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಬಾಬು ಹೆಗ್ಡೆ ಹೆಸರು ಕೇಳಿ ಬಂದಿದ್ದು, ಬೈಂದೂರು ಕ್ಷೇತ್ರದಲ್ಲಿ ಬಿ. ಎಸ್. ಯಡಿಯೂರಪ್ಪ ,ಸಂಸದ ರಾಘವೇಂದ್ರ ಅವರ ಹಿಡಿತದಲ್ಲಿರುವುದರಿಂದ ಅವರು ಸೂಚಿಸುವ ಅಭ್ಯಥಿ೯ಗೆ ಅಂತಿಮವಾಗಿ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಟಿಕೆಟ್ ವಂಚಿತ ಬಾಬು ಹೆಗ್ಡೆ ಮತ್ತು ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರು ಪಕ್ಷದ ಹಿರಿಯರು ಒಳ್ಳೆಯ ಸುದ್ಧಿ ನೀಡುವ ಭರವಸೆಯಲ್ಲಿದ್ದಾರೆ.
ಕಾಪುವಿಗೆ ಬಂಟ ಸಮುದಾಯ, ಉಡುಪಿಗೆ ಮೊಗವೀರ ಸಮುದಾಯ,ಕಾಕ೯ಳಕ್ಕೆ ಬಿಲ್ಲವ, ಕುಂದಾಪುರಕ್ಕೆ ಬ್ರಾಹ್ಮಣ ಕೊಟಾಕ್ಕೆ ಟಿಕೆಟ್ ನೀಡಿದ್ದು, ಬೈಂದೂರಿಗೆ ಮಾತ್ರ 2 ನೇ ಪಟ್ಟಿಯಲ್ಲಿ ಬಂಟ ಸಮುದಾಯಕ್ಕೆ ಟಿಕೆಟ್ ನೀಡುವ ಭರವಸೆಯಲ್ಲಿದ್ದಾರೆ.






