ತ್ಯಾಗ, ಬಲಿದಾನದ ಸ್ಮರಣೆ: ಶುಭ ಶುಕ್ರವಾರ

Views: 0
ವಿಶ್ವದಾದ್ಯಂತ ಕ್ರೈಸ್ತ ಭಾಂದವರು ಯೇಸು ಕ್ರಿಸ್ತನ ಶಿಲುಬೆಯ ಮರಣದಲ್ಲಿ ಅಡಗಿರುವ ಅಪೂರ್ವ ತ್ಯಾಗ, ಬಲಿದಾನವನ್ನು ಭಕ್ತಿಯಿಂದ ಆಚರಿಸುವ, ಮೋಕ್ಷ ಸಾಮ್ರಾಜ್ಯ ದೊರಕಿದ ದಿನವೇ ಗುಡ್ ಫ್ರೈಡೇ.
40 ದಿನಗಳ ಉಪವಾಸ ಮಾಡುವುದು, ದಾನಧಮ೯ ಮತ್ತು ತ್ಯಾಗದಿಂದ ಕೂಡಿದ, ಸೇವಾಕಾಯ೯ಗಳಲ್ಲಿ ತೊಡಗಿಸಿಕೊಳ್ಳುವುದು ಕ್ರೈಸ್ತರಲ್ಲಿ ಬೆಳೆದು ಬಂದಿರುವ ಒಂದು ಧಾರ್ಮಿಕ ಸಂಪ್ರದಾಯವಾಗಿದೆ.
ಕ್ರಿಸ್ತನು ಸಿಲುಬೆ ಮೇಲೆ ಸಾಯುವಾಗ ಅನುಭವಿಸಿದ ಭಯಂಕರ ಹಿಂಸೆಯನ್ನು ನೆನಪು ಮಾಡಿಕೊಂಡು ಆ ಬಗ್ಗೆ ಅನುತಾಪ ಕೋರಿ, ಆತನ ಕ್ಷಮೆಯನ್ನು ಧ್ಯಾನಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ಜಗತ್ತಿನಲ್ಲಿ ಬಾಳಿ ಬದುಕಿದ್ದು 33 ವಷ೯ಗಳಾದರೂ ಆತನು ಬಿಟ್ಟು ಹೋದ ಉಪದೇಶಗಳು ಇಂದಿಗೂ ಪ್ರಸ್ತುತ. ಆತನು ಪ್ರತಿಪಾದಿಸಿದ ವಿಚಾರಧಾರೆ, ಮಾನವ ಪ್ರೇಮದಿಂದ ಬೋಧಿಸಿದ ತತ್ವಗಳು ವಿಶ್ವಮಾನ್ಯವಾಗಿದೆ.
ಸಮಸ್ತ ಜಗಕ್ಕೆ ಮುಕ್ತಿ ನೀಡಿದ ಮಹಾನುಭಾವ ಯೇಸು. ಹೀಗಾಗಿಯೇ ಅವರ ಬದುಕು ಶಿಲುಬೆ ಮೇಲೆ ಅಂತ್ಯಗೊಳ್ಳಲಿಲ್ಲ ಶಿಲುಬೆಗೇರಿದ ಮೂರನೆಯ ದಿನ ಪುನುರುಸ್ಥಾನಗೊಂಡು ವಿಶ್ವರೂಪವಾದರು.
ಸೇವೆ, ಪ್ರೀತಿ, ಮತ್ತು ಕ್ಷಮೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮನುಷ್ಯತ್ವದಿಂದ ದೈವತ್ವದ ಕಡೆಗೆ ಸಾಗಿ, ಯೇಸುವಿನಲ್ಲಿ ಐಕ್ಯರಾಗೋಣ.






