ರಾಜಕೀಯ

ರಾಜಕೀಯ ನಿವೃತ್ತಿ ಇಲ್ಲ ಹಾಲಾಡಿ 

Views: 0

ಕುಂದಾಪುರ : ನಾನು ಸ್ಪಧಾ೯ಕಣದಿಂದ ಹಿಂದೆ ಸರಿದಿದ್ದು ಬಿಟ್ಟರೆ, ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಇಲ್ಲ ಬಿಜೆಪಿಯಿಂದ ಯಾರೇ ಅಭ್ಯಥಿ೯ ಸ್ಪಧಿ೯ಸಿದರೂ ನಾನು ಅವರಿಗೆ ಬೆಂಬಲ ನೀಡುತ್ತೇನೆ ಎಂದು ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ 24 ವಷ೯ಗಳ ರಾಜಕೀಯ ಜೀವನದಲ್ಲಿ ಒಡನಾಡಿಯಾಗಿದ್ದ ಕಿರಣ ಕೊಡ್ಗಿ ಅವರಿಗೆ ಟಿಕೆಟ್ ನೀಡಿದರೆ ಸಂತೋಷ, ಇಂಥವರಿಗೆ ಟಿಕೆಟ್ ಕೊಡಿ ಎಂದು ಹೇಳಲು ನನಗೆ ಅಧಿಕಾರವಿಲ್ಲ.

ಬಿಜೆಪಿಯಿಂದ ಹಾಗೂ ಪಕ್ಷೇತರನಾಗಿ ಸ್ಪಧಿ೯ಸಿದಾಗ ಮತದಾರರು ನನಗೆ ಬೆಂಬಲಿಸಿ ಜನಸೇವೆಗೆ ಅವಕಾಶ ನೀಡಿದ್ದಾರೆ.

ಟಿಕೆಟ್ ಹಂಚಿಕೆಯ ಕುರಿತು ಕೋರ್ ಕಮಿಟಿ ಸಭೆಯಲ್ಲಿ ನನಗೆ ಮಾತನಾಡಲು ಸೂಚಿಸಿದಾಗ, ಪಟ್ಟಿ ಬಿಡುಗಡೆಯಾದಾಗ ನನ್ನ ಹೆಸರು ಬಂದರೆ ನಾನು ಬೇಡ ಎಂದು ಹೇಳಿದರೆ ತಪ್ಪು ಭಾವನೆಗೆ ಕಾರಣವಾಗಬಾರದು ಎಂದು ನನ್ನ ನಿಧಾ೯ರವನ್ನು ಪ್ರಕಟಿಸಿರುವೆ ಎಂದರು.

Related Articles

Back to top button
error: Content is protected !!