ಚುನಾವಣಾ ಸ್ಪಧೆ೯ಯಿಂದ ಹಿಂದೆ ಸರಿದ ಹಾಲಾಡಿ

Views: 1
ಕುಂದಾಪುರ : ಕಳೆದ 24 ವಷ೯ಗಳಿಂದ ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ಸ್ಪಧ೯ಯಿಂದ ಹಿಂದೆ ಸರಿಯುವ ಅಧಿಕೃತ ಘೋಷಣೆ ಮಾಡಿದ್ದಾರೆ.
1994 ರಲ್ಲಿ ಕಾಂಗ್ರೆಸ್ ನ ಪ್ರತಾಪ್ ಚಂದ್ರ ಶೆಟ್ಟಿ ಎದುರು ಸೋತ ಎ. ಜಿ. ಕೊಡ್ಗಿ ಅವರು ತಮ್ಮ ಶಿಷ್ಯರಾದ ಹಾಲಾಡಿಯವರಿಗೆ 1999 ರ ಚುನಾವಣಿಗೆ ಸೀಟ್ ನ್ನು ಬಿಟ್ಟು ಕೊಟ್ಟಿದ್ದರು. ಇಂದು ಅದೇ ಋಣಕ್ಕಾಗಿ ಕೊಡ್ಗಿಯವರ ಪುತ್ರ ಕಿರಣ್ ಕೊಡ್ಗಿಯವರಿಗೆ ಸೀಟ್ ನ್ನು ಬಿಟ್ಟು ಕೊಡುವ ಇಂಗಿತ ವ್ಯಕ್ತವಾಗಿದೆ.
ಸೋಲಿಲ್ಲದ ಸರದಾರ, ಕುಂದಾಪುರದ ವಾಜಪೇಯಿ ಎಂದು ಅಭಿಮಾನಿಗಳಿಂದ ಗುರುತಿಸಿಕೊಂಡಿರುವ ಹಾಲಾಡಿ ನಿಧಾ೯ರದಿಂದ ಈ ಹಿಂದೆ ಕ್ಷೇತ್ರ ವಿಂಗಡಣೆಯಿಂದಾಗಿ ಬೈಂದೂರು ಮತ್ತು ಉಡುಪಿ ಕ್ಷೇತ್ರದಲ್ಲಿ ಹಾಲಾಡಿಯವರ ಹವಾ ಇದೆ.
ಹಾಲಾಡಿಯವರ ದಿಡೀರ್ ಬೆಳವಣಿಗೆಯಲ್ಲಿ ಸ್ಪಧೆ೯ಯಿಂದ ಹಿಂದೆ ಸರಿದ ಹಾಲಾಡಿಯವರ ಮನೆಗೆ ಸೋಮವಾರ ಬೆಳಿಗ್ಗೆಯಿಂದಲೇ ನೀವೇ ಸ್ಪಧಿ೯ಸಬೇಕೆಂದು ಒತ್ತಡ ಹಾಕಿದ್ದಾರೆ.
ಕುಂದಾಪುರದಲ್ಲಿ ಬಂಟ ಸಮುದಾಯದವರು ಅತೀ ಹೆಚ್ಚು ಭಾರಿ ಶಾಸಕರಾಗಿದ್ದರಿಂದ, ಜಾತಿ ಕೋಟಾದಡಿಯಲ್ಲಿ ಉಳಿದ ಕ್ಷೇತ್ರಗಳಿಗೂ ಪ್ರಭಾವ ಬೀರುವುದರಿಂದ ಹಾಲಾಡಿ ಸೂಚಿಸುವ ಅಭ್ಯಥಿ೯ಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚು, ಅವರು ಪಕ್ಷದ ಚಿಹ್ನೆ ಅಡಿಗಿಂತಲೂ ಪಕ್ಷೇತರರಾಗಿ ಸ್ಪಧಿ೯ಸಿದಾಗ ಅತಿ ಹೆಚ್ಚು ಮತಗಳನ್ನು ಪಡೆದು ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪಕ್ಷದ ಹಿರಿಯ ರಾಜಕಾರಣಿಯಾಗಿ, 5 ಭಾರಿ ಶಾಸಕರಾಗಿದ್ದರೂ ಸಚಿವ ಸ್ಥಾನ ಸಿಗಲಿಲ್ಲ, ಆದರೂ ಪಕ್ಷದ ವಿರುದ್ಧ ಹೋಗುವ ಇಂಗಿತ ವ್ಯಕ್ತಪಡಿಸಲಿಲ್ಲ.
ಬಿಜೆಪಿಯ ಹೊಸಮುಖದ ಪರಿಚಯದ ಚಿಂತನೆ, ಕ್ಷೇತ್ರ ವಾರು ಜಾತಿ ಲೆಕ್ಕಾಚಾರದಲ್ಲಿ ಹಾಲಾಡಿ ಸೂಚಿಸುವ ಅಭ್ಯಥಿ೯ಗೆ ಟಿಕೆಟ್ ನೀಡುವ ಅನಿವಾಯ೯ತೆ ಸೃಷ್ಟಿಯಾಗಿದೆ.






