ರಾಜಕೀಯ
ಕುಂದಾಪುರಕ್ಕೆ ಕಿರಣ್ ಕೊಡ್ಗಿ ? ಬೈಂದೂರಿಗೆ ಮುನಿಯಾಲು ಉದಯ ಕುಮಾರ ಶೆಟ್ಟಿ?

Views: 0
ಕುಂದಾಪುರ : ಈ ವಾರದಲ್ಲಿ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅಭ್ಯಥಿ೯ಗಳ ಪಟ್ಟಿ ಹೊರಬೀಳುವ ಮೊದಲು ಕುಂದಾಪುರಕ್ಕೆ ಕಿರಣ ಕೊಡ್ಗಿ, ಬೈಂದೂರಿಗೆ ಮುನಿಯಾಲು ಉದಯ ಕುಮಾರ ಶೆಟ್ಟಿ ಹೆಸರು ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ನಲ್ಲಿ ಅಭ್ಯಥಿ೯ಗಳ ಅಂತಿಮ ಪಟ್ಟಿ ತಯಾರಿಯಲ್ಲಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ರಾಜಕೀಯ ಗುರು ಎ. ಜಿ. ಕೊಡ್ಗಿಯವರ ಪುತ್ರ ಹಾಲಾಡಿಯವರ ಶಿಷ್ಯ ಕಿರಣ ಕೊಡ್ಗಿಯವರಿಗೆ ತನ್ನ ಸ್ವ ಇಚ್ಛೆಯಿಂದ ಸೀಟ್ ನ್ನು ಬಿಟ್ಟು ಕೊಡುವ ಸಾಧ್ಯತೆ ಇದೆ.?
ಇನ್ನೊಂದೆಡೆ ಬೈಂದೂರಿನಲ್ಲಿ ಬಿಜೆಪಿ ಹೊಸ ಅಭ್ಯಥಿ೯ಗಳ ಹುಡುಕಾಟದಲ್ಲಿರುವಾಗ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದಿರುವ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಹೆಸರು ಪ್ರಸ್ತಾವವಾಗಿದೆ.






