ಇತರೆ
ಚಿಕ್ಕಬಳ್ಳಾಪುರ: ಇಬ್ಬರು ಯುವತಿಯರು ಅನುಮಾನಾಸ್ಪದ ನಿಗೂಢ ನಾಪತ್ತೆ ಪ್ರಕರಣ ದಾಖಲು

Views: 88
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಯುವತಿಯರ ಅನುಮಾನಸ್ಪದ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿದ್ದು ಪೊಲೀಸರಿಗೆ ತಲೆ ಬಿಸಿಯಾಗಿ ಪರಿಣಮಿಸಿದೆ.
ಕಳೆದ ಒಂದೇ ವಾರದಲ್ಲಿ ಇಬ್ಬರು ಯುವತಿಯರು ನಾಪತ್ತೆ ಕೇಸ್ ಗಳು ಬೆಳಕಿಗೆ ಬಂದಿವೆ. ಇದರಿಂದ ಜಿಲ್ಲೆಯ ಪೋಷಕರಲ್ಲಿ ಆತಂಕ ಉಂಟಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ 22 ವರ್ಷದ ಸಿ.ಶಿಲ್ಪಾ ಹಾಗೂ ಕಲ್ಲುಕುಂಟೆ ಗ್ರಾಮದ 20 ವರ್ಷದ ತೇಜಸ್ವಿನಿ ನಾಪತ್ತೆಯಾಗಿದ್ದಾರೆ.
ಇಬ್ಬರು ಯುವತಿಯರ ಪತ್ತೆಗೆ ಪೋಷಕರಿಂದ ಮಿಸ್ಸಿಂಗ್ ಕಂಪ್ಲೇಂಟ್ ನೀಡಿ ಯುವತಿಯರ ಪತ್ತೆಗಾಗಿ ಮನವಿ ಮಾಡಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.






