ಇತರೆ

ಬ್ರಹ್ಮಾವರ:ಹಲುವಳ್ಳಿ ಕೊಂಟಿಬೈಲು ಮಹಿಳೆ ನಾಪತ್ತೆ

Views: 130

ಬ್ರಹ್ಮಾವರ: ತಾಲೂಕಿನ ಹಲುವಳ್ಳಿ ಕೊಂಟಿಬೈಲು ಎಂಬಲ್ಲಿನ ಮಹಿಳೆ ಸುಜಾತಾ ಶೆಟ್ಟಿ (39) ಕಾಣೆಯಾಗಿದ್ದಾರೆ.

ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅವರು ಈ ಹಿಂದೆ ಹಲವು ಬಾರಿ ಮನೆ ಬಿಟ್ಟು ಹೋಗಿ ಸಂಬಂಧಿಕರ ಮನೆಯಲ್ಲಿ ಉಳಿದು ಕೆಲವು  ದಿನಗಳ ಅನಂತರ ಮರಳುತ್ತಿದ್ದರು.

ಮೇ 24ರ ಸಂಜೆ ಮನೆಯಿಂದ ಹೋದವರು ಇದುವರೆಗೆ ವಾಪಸಾಗಿಲ್ಲ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

ಕಂದು ಬಿಳಿ ಬಣ್ಣದ ಚೂಡಿದಾರ್‌, ಕಂದು ಬಣ್ಣದ ಪ್ಯಾಂಟ್‌ ಧರಿಸಿದ್ದು, ಕಾಲಿನಲ್ಲಿ ಕತ್ತಿಯ ಗಾಯದ ಗುರುತು ಇದೆ. ಇವರ ಕುರಿತು ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಠಾಣೆ (0820-2561044) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Related Articles

Back to top button
error: Content is protected !!