ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

Views: 72
ವಿಧಾನ ಪರಿಷತ್ ಟಿಕೆಟ್ ಗೆ ಫೈಪೋಟಿ ಜೋರಾಗಿದ್ದು, ದೆಹಲಿ ನಾಯಕರ ಜೊತೆಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಯಲ್ಲಿದ್ದಾರೆ. ಸಿದ್ಧರಾಮಯ್ಯ ಅವರ ಪುತ್ರ ಯತೀಂದ್ರ, ಸಚಿವರಾದ ಭೋಸರಾಜು,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ವಿನಯ್ ಕಾರ್ತಿಕ್ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಪಕ್ಕ ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಂದೆಗಾಗಿ ಯತೀಂದ್ರ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿದ್ದರು.ಈ ತ್ಯಾಗಕ್ಕೆ ಪ್ರತಿಯಾಗಿ ನಿಮ್ಮನ್ನು ಎಂ ಎಲ್ ಸಿ ಮಾಡುತ್ತೇವೆ ಅಂತ ಕಾಂಗ್ರೆಸ್ ವರಿಷ್ಟರು ಹೇಳಿದ್ದರು.ಇನ್ನು ಭೋಸರಾಜು ಹೇಳಿ ಕೇಳಿ ರಾಹುಲ್ ಗಾಂಧಿಯವರ ಅಭ್ಯರ್ಥಿಯಾಗಿದ್ದು, ಸದ್ಯ ಸಚಿವರಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಳ ನಡುವೆಯೇ ರಾಜ್ಯ ಕೈ ನಾಯಕರು ಪರಿಷತ್ ಅಭ್ಯರ್ಥಿಗಳ ಸಂಭಾವ್ಯರ ಪಟ್ಟಿ ಇಲ್ಲಿದೆ
* ಯತೀಂದ್ರ ಸಿದ್ದರಾಮಯ್ಯ
* ಎನ್ ಎಸ್ ಬೋಸರಾಜ
* ಡಾ.ಕೆ ಗೋವಿಂದರಾಜು, ಸಿಎಂ ರಾಜಕೀಯ ಕಾರ್ಯದರ್ಶಿ
* ವಿನಯ್ ಕಾರ್ತಿಕ್, ಕೆಪಿಸಿಸಿ ಖಜಾಂಚಿ
* ವಸಂತ್ ಕುಮಾರ್, ಕಾರ್ಯಾಧ್ಯಕ್ಷ
* ಆಘಾ ಸುಲ್ತಾನ್, ಪ್ರಧಾನ ಕಾರ್ಯದರ್ಶಿ
* ವಿ ಆರ್ ಸುದರ್ಶನ್, ಉಪಾಧ್ಯಕ್ಷ ಕೆಪಿಸಿಸಿ
* ವಿನಯ ಕುಮಾರ್ ಸೊರಕೆ, ಪ್ರಚಾರ ಸಮಿತಿ ಅಧ್ಯಕ್ಷ
* ವಿಜಯ ಮುಳಗುಂದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
* ಬಿವಿ ಶ್ರೀನಿವಾಸ್, ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
* ಸಂದೀಪ್ ಕುಮಾರ್ ಎಐಸಿಸಿ ಕಾರ್ಯದರ್ಶಿ
* ಎಲ್ ನಾರಾಯಣ್, ಕಚೇರಿ ಕಾರ್ಯದರ್ಶಿ
* ಬಿ ಆರ್ ನಾಯ್ಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
* ಡಾ.ಆನಂದ ಕುಮಾರ್ ಕಿಸಾನ್ ಕಾಂಗ್ರೆಸ್
* ಕೃಷ್ಣಂ ರಾಜು, ಕೆಪಿಸಿಸಿ ಉಪಾಧ್ಯಕ್ಷರು
* ರಮೇಶ್ ಬಾಬು, ಮಾಜಿ ಎಂಎಲ್ಸಿ
* ಒಬೆದುಲ್ಲಾ ಶರೀಫ್, ಉಪಾಧ್ಯಕ್ಷರು ಕೆಪಿಸಿಸಿ
* ಎಸ್ ಎ ಹುಸೇನ್, ಉಪಾಧ್ಯಕ್ಷರು ಕೆಪಿಸಿಸಿ
* ವಿ ಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
* ಮುರುಳಿಧರ ಹಾಲಪ್ಪ, ಉಪಾಧ್ಯಕ್ಷ, ಕೆಪಿಸಿಸಿ
* ಮುದ್ದು ಗಂಗಾಧರ್, ಕೆಪಿಸಿಸಿ ಜನರಲ್ ಸೆಕ್ರೆಟರಿ
* ಭವ್ಯ ನರಸಿಂಹ ಮೂರ್ತಿ, ಕೆಪಿಸಿಸಿ ಜನರಲ್ ಸೆಕ್ರೆಟರಿ
* ಸುಷ್ಮಾ ರಾಜಗೋಪಾಲ ರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
* ಕಮಲಾಕ್ಷಿ ರಾಜಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
* ಪುಷ್ಪಾ ಅಮರನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
* ವೀಣಾ ಕಾಶಪ್ಪನವರ್, ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ
* ಸಿ ಎಸ್ ದ್ವಾರಕಾನಾಥ್, ಅಧ್ಯಕ್ಷರು, ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗ
* ಆರತಿ ಕೃಷ್ಣ, ಎಐಸಿಸಿ ಕಾರ್ಯದರ್ಶಿ
* ಕಾಂತ ನಾಯಕ್, ಕೌಶಲ್ಯಾಭಿವೃದ್ದಿ ಮಂಡಳಿ ಅಧ್ಯಕ್ಷರು
* ಅರವಿಂದ ಕುಮಾರ್ ಅರಳಿ, ಹಾಲಿ ಎಂಎಲ್ಸಿ
*ಹರೀಶ್ ಕುಮಾರ್, ಮಂಗಳೂರು, ಹಾಲಿ ಎಂಎಲ್ಸಿ






