ಇತರೆ
ಪುತ್ತೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆಗೆ ಫಲಿಸದೆ ಸಾವು

Views: 78
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.
ಮೃತ ವಿದ್ಯಾರ್ಥಿನಿ ಮಂಜುಶ್ರೀ (20) ಮಿತ್ತೂರು ಸಮೀಪದ ಸೂರ್ಯ ನಿವಾಸಿ ಲಿಂಗಪ್ಪ ಗೌಡರ ಪುತ್ರಿ, ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ
ಈ ಹಿಂದೆ ಕಬಕ ಸಮೀಪದ ಕೂವೆತ್ತಿಲದಲ್ಲಿ ಆಲ್ಟೋ ಕಾರು ಹಾಗೂ ಆಕ್ಟಿವಾ ನಡುವೆ ನಡೆದ ಅಪಘಾತದಲ್ಲಿ ಮಂಜುಶ್ರೀ ಗಂಭೀರ ಗಾಯಗೊಂಡಿದ್ದರು. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ರಾತ್ರಿ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.






