ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ PUC ವಿದ್ಯಾರ್ಥಿನಿ ಮೃತದೇಹ ಬಾತ್ ರೂಂ ನಲ್ಲಿ ಪತ್ತೆ

Views: 272
ಬೆಂಗಳೂರು:ಬೆಂಗಳೂರಿನಲ್ಲಿ ಯುವತಿಯೊಬ್ಬಳ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ PUC ವಿದ್ಯಾರ್ಥಿನಿ ಮೃತದೇಹ ಪತ್ತೆಯಾಗಿದೆ.
ಪ್ರಭುಧ್ಯಾ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಈಕೆಯ ಶವ ಪತ್ತೆಯಾಗಿದೆ
ಪ್ರಭುಧ್ಯಾ ಈ ಹಿಂದೆ ಎರಡು-ಮೂರು ಬಾರಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದೀಗ ಮನೆಯಲ್ಲಿ ಯಾರು ಇಲ್ಲದ ವೇಳೆ ಚಾಕುವಿನಿಂದ ಕುತ್ತಿಗೆ ಹಾಗೂ ಕೈಯನ್ನು ಕೊಯ್ದುಕೊಂಡಿದ್ದಾಳೆ ಎನ್ನಲಾಗುತ್ತಿದೆ.
ಘಟನೆ ನಡೆದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ತಾಯಿ ಹೊರಗೆ ಕೆಲಸಕ್ಕೆ ಹೋಗಿದ್ರು. ಮೃತಳ ತಮ್ಮ ಮನೆಗೆ ಬಂದು ನೋಡಿದಾಗ ಸಹೋದರಿ ಪ್ರಭುಧ್ಯಾ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸರಿಂದ ಅನುಮಾನಾಸ್ಪದ ಸಾವು ಕೇಸ್ ದಾಖಲಾಗಿದೆ.
ಸದ್ಯ ಪೊಲೀಸರು ಮೃತ ಯುವತಿಯ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ವಿದ್ಯಾಭ್ಯಾಸದ ವಿಚಾರಕ್ಕೆ ಸಾವನ್ನಪ್ಪಿದ್ದಾಳಾ ಅಥವಾ ಬೇರೆ ಕಾರಣ ಇದೆಯಾ? ಅನ್ನೋ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.






