ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

Views: 93
ವಿಜಯಪುರ: ನಾಪತ್ತೆಯಾಗಿದ್ದ ಮೂವರು ಮಕ್ಕಳು ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರದ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗದಗ ಮೂಲದ ಅನುಷ್ಕಾ (10), ವಿಜಯ್ (8), ಮಿಹರ್ (7) ಶವವಾಗಿ ಪತ್ತೆಯಾದ ಮಕ್ಕಳು. ಶಾಲೆ ರಜೆ ಹಿನ್ನೆಲೆಯಲ್ಲಿ ವಿಜಯಪುರದ ಸಂಬಂಧಿಕರ ಮನೆಗೆ ಬಂದಿದ್ದ ಮಕ್ಕಳು ನಾಪತ್ತೆಯಾಗಿದ್ದರು. ಮಕ್ಕಳು ನಾಪತ್ತೆ ಹಿನ್ನೆಲೆಯಲ್ಲಿ ದಿನ ಪೂರ್ತಿ ಪೋಷಕರು, ಸಂಬಂಧಿಕರು ಹುಡುಕಾಟ ನಡೆಸಿದರು ಎಲ್ಲಿಯು ಅವರು ಪತ್ತೆ ಆಗಿರಲಿಲ್ಲ. ಆದರೆ ಮಕ್ಕಳ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು
ವಿಜಯಪುರ ನಗರದ ಶಾಂತಿ ನಿಕೇತನ ಶಾಲೆಯ ಬಳಿಯಿರುವ ನೀರು ಶುದ್ಧೀಕರಣ ಘಟಕದಲ್ಲಿ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಇದು ಮಹಾನಗರ ಪಾಲಿಕೆಯ ನೀರು ಶುದ್ಧೀಕರಣ ಘಟಕವಾಗಿದೆ. ನೀರು ಶುದ್ಧೀಕರಣ ಘಟಕದ ಮುಖ್ಯ ಗೇಟ್ ಗೆ ಸೆಕ್ಯೂರಿಟಿ ಗಾರ್ಡ್ ಇರದಿದ್ದಕ್ಕೆ ಈ ಅವಘಡ ನಡೆದಿದೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ನೀರು ಶುದ್ಧೀಕರಣ ಘಟಕದಲ್ಲಿದ್ದ ಮಕ್ಕಳ ಮೃತದೇಹಗಳನ್ನು ಪೊಲೀಸರು ಹೊರಕ್ಕೆ ತೆಗೆದಿದ್ದಾರೆ. ಈ ವೇಳೆ ಪೋಷಕರ, ಸಂಬಂಧಿಕ ಆಕ್ರಂದನ ಮುಗಿಲು ಮುಟ್ಟಿತ್ತು.






