ಜನಮನ

ಮುದ್ರಾಡಿಯವರ ಸಮಾಜ ಹಿತಚಿಂತನೆ 

Views: 0

ಮುದ್ರಾಡಿಯವರು ಭಕ್ರೇಮಠದ ಶ್ರೀ ಭಧ್ರಕಾಳಿಯ ಭಕ್ತರಾಗಿದ್ದು, ಇವರು ಭಧ್ರಕಾಳಿಯ ಕುರಿತು ತನ್ನ 12ನೇ ವಷ೯ದಲ್ಲಿ ಬರೆದ ಪಾಹಿಮಾಂ ದೇವಿ ಗೀತೆ ರಚಿಸುವ ಮೂಲಕ ಸಾಹಿತ್ಯ ಪ್ರಪಂಚಕ್ಕೆ ಪಾದಾಪ೯ಣೆ ಮಾಡಿ ದೇವಿಯ ಅನುಗೃಹದಿಂದ ಮುದ್ರಾಡಿ ಕೇಶವ ಶೆಟ್ಟಿಗಾರಅಂಬಾತನಯ ಮುದ್ರಾಡಿ ಯಾಗಿ ನಾಮಾಂಕಿತರಾದರು.ಧಾಮಿ೯ಕವಾಗಿ 40 ವಷ೯ ರಾಜ್ಯದೆಲ್ಲೆಡೆ ಹರಿಕಥಾ ದಾಸರಾಗಿ, ಧಾಮಿ೯ಕ ಉಪನ್ಯಾಸಕರಾಗಿ, ಜಿನದಾಸರಾಗಿ, ಏಕೈಕ ಜೈನೇತರ ಜಿನದಾಸರೆಂದು ಪ್ರಸಿದ್ಧಿ ಪಡೆದರು.

ಸಾಹಿತ್ಯಕವಾಗಿ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹೆಬ್ರಿ, ಕಾಕ೯ಳ ತಾಲೂಕು ಸೇರಿದಂತೆ ಹಲವಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿದ್ದರು.

ರಾತ್ರಿ ಬೆಳಗಾಗುವುದರೊಳಗಾಗಿ ಇವರು ರಚಿಸಿರುವ ಕ್ರಿಸ್ತ ಕಾರುಣ್ಯ ಯಕ್ಷಗಾನ ಪ್ರಸಂಗದಲ್ಲಿ ಏಸು ಕ್ರಿಸ್ತನ ಪಾತ್ರ ನಿವ೯ಹಿಸಿ ಭಾವೈಕ್ಯತೆ ಮೂಡಿಸಿ ಸೈ ಅನಿಸಿಕೊಂಡಿದ್ದಾರೆ.

*ಪ್ರತಿಷ್ಠಿತ ಪಾತಿ೯ ಸುಬ್ಬ ,ರಾಜ್ಯೋತ್ಸವ, ಕನ್ನಡಶ್ರಿ ,ಸೀತಾನದಿ ಗಣಪಯ್ಯ ಶೆಟ್ಟಿ, ಕಲಾವಾಚ್ಪತಿ* ಇನ್ನಿತರ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಮುದ್ರಾಡಿಯವರ ಹಿತ ಚಿಂತನೆಯಲ್ಲಿ

–ತಾನು ತನಗಾಗಿ ತನ್ನವರಿಗಾಗಿ ಚಿಂತಿಸುವಂತೆ, ತಾನು ಹುಟ್ಟಿ ಬೆಳೆದ ಸಮಾಜದ ಬಗೆಗೆ ಚಿಂತಿಸಬೇಕಾದುದೂ ಅನಿವಾರ್ಯ.

— ಮನುಷ್ಯನ ಬದುಕು ಪಾಡಾಗಬಾರದು, ಹಾಡಾಗ ಬೇಕು ಅಂದರೆ ನಾಕು ಜನ ನಾಕು ಕಾಲಕ್ಕೆ ಕೊಂಡಾಡುವಂತಿರಬೇಕು.

— ಸಮಾಜಗಳಲ್ಲಿ ಸಮಾಜದ ಜನರು ಬದುಕು ಸೃಷ್ಟಿಸಿದ ನಮ್ಮನ್ನು ನಿಮ್ಮಂತೆ ಕಾಣಿರಿ, ಒಂದಿಷ್ಟು ಪ್ರೀತಿಯನ್ನು ನೀಡಿರಿ

ಮುದ್ರಾಡಿಯವರ ಸಮಾಜ ಹಿತ ಚಿಂತನೆ ನುಡಿಗಳು ಸಾವ೯ಕಾಲಿಕ ವಾಗಲಿ, ಮಾದರಿ ಸಮಾಜಕ್ಕೆ ಅವರ ಕೊಡುಗೆ ಚಿರಸ್ಥಾಯಿಯಾಗಲಿ.

Related Articles

Back to top button
error: Content is protected !!