ಇತರೆ

ಕುಂದಾಪುರ: ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿ ಸಾವು 

Views: 160

ಕುಂದಾಪುರ: ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕೆಂಚನೂರಿನಲ್ಲಿ ನಡೆದಿದೆ.

ಕೆಂಚನೂರು ಗ್ರಾಮದ ವೆಂಕ ಅವರ ಪುತ್ರ ಸುಧೀಂದ್ರ (31) ಮೃತಪಟ್ಟವರು.

ಮನೆಯಿಂದ ಹೊರಗೆ ಹೋದ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಹುಡುಕಾಡಲಾಯಿತು. ಕೆರೆ ಸಮೀಪ ಬಂಡೆಯ ಬಳಿ ಚಪ್ಪಲಿ ಹಾಗೂ ಗಾಳದ ಬೆಂಡು ನೀರಿನಲ್ಲಿ ತೇಲಾಡುತ್ತಿರುವುದು ಪತ್ತೆಯಾಗಿತ್ತು. ಅನುಮಾನಗೊಂಡು ಈಜುಗಾರರನ್ನು ಕರೆಸಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ.

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!