ಇತರೆ

ಗಂಡನ ಕೈ, ಕಾಲು ಕಟ್ಟಿ ಚಿತ್ರಹಿಂಸೆ ನೀಡಿ ಹತ್ಯೆಗೆ ಯತ್ನಿಸಿದ ಪತ್ನಿ: ಪ್ರಕರಣ ಸಂಬಂಧ ಇನ್ನಷ್ಟು ಅಪ್ಡೇಟ್ ಬಹಿರಂಗ !

Views: 149

ಲಕ್ನೋ: ಉತ್ತರ ಪ್ರದೇಶದ ಬಿಜ್ನೋರ್ ನಗರದಲ್ಲಿ ತನ್ನ ಗಂಡನ ಕೈ, ಕಾಲುಗಳನ್ನು ಕಟ್ಟಿ ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಲು ಹೆಂಡತಿ ಯತ್ನಿಸಿದ್ದಾಳೆ. ಸದ್ಯ ಈ ಪ್ರಕರಣ ಸಂಬಂಧ ಇನ್ನಷ್ಟು ಅಪ್ಡೇಟ್ ಇದೀಗ ಬಹಿರಂಗಗೊಂಡಿದೆ.

ಬಿಜ್ನೋರ್ ನಗರದ ನಿವಾಸಿ ಮನನ್ ಜೈದಿ ಹಾಗೂ ಮೆಹರ್ ಜಹಾನ್ ಕಳೆದ ವರ್ಷ ನವೆಂಬರ್ 17 ರಂದು ಮದುವೆಯಾಗಿದ್ದರು. ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಷಮ್ಯ ಬೆಳೆದು ಒಂದೇ ಮನೆಯಲ್ಲಿ ಬೇರೆ ಬೇರೆಯಾಗಿ ಜೀವನ ಮಾಡುತ್ತಿದ್ದರು. ಈ ವೇಳೆ ಹೆಂಡತಿ ಮದ್ಯಪಾನ, ಧೂಮಪಾನದ ಚಟಕ್ಕೆ ಬಿದ್ದಿರುವುದು ಗಂಡ ತಿಳಿದುಕೊಂಡಿದ್ದಾನೆ ಎಂದು ಹೇಳಲಾಗಿದೆ.

ಆದರೆ ನಂತರ ಗಂಡನಿಗೆ, ಹೆಂಡತಿ ಟಾರ್ಚರ್ ಕೊಡಲು ಪ್ರಾರಂಭಿಸಿದ್ದಾಳೆ. ನೀನು ನನಗೆ ಟಾರ್ಚರ್ ಕೊಡುತ್ತಿದಿಯಾ, ಹೊಡೆಯುತ್ತಿದ್ದಿಯಾ, ಮೋಸ ಮಾಡಿದ್ದೀಯಾ ಎಂದು ಸುಳ್ಳು ಹೇಳಿ ಜೈಲಿಗೆ ಹಾಕಿಸುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಗಂಡ ಫುಲ್ ಸೈಲೆಂಟ್ ಆಗಿ ಏನು ಮಾಡಬೇಕು ಎನ್ನುವುದು ಗೊತ್ತಾಗದೇ ಮನೆಯಲ್ಲಿ ಪತ್ನಿಗೆ ತಿಳಿಯದಂತೆ ಸಿಸಿಟಿವಿಗಳನ್ನು ಅಳವಡಿಸಿ ತನ್ನ ಮೇಲೆ ಹೆಂಡತಿ ಮಾಡುತ್ತಿದ್ದ ಎಲ್ಲ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ.

ವಿಡಿಯೋದಲ್ಲಿ ಗಂಡನ ಎದೆಯ ಮೇಲೆ ಕೂರುವ ಪತ್ನಿ ಕೆನ್ನೆಗೆ ನಿರಂತರವಾಗಿ ಹೊಡೆದು, ಅವನ ಪ್ಯಾಂಟ್ ಸಮೇತ ಬಿಚ್ಚಿ ಖಾಸಗಿ ಅಂಗಗಳನ್ನು ಸಿಗರೇಟ್ನಿಂದ ಸುಡುತ್ತಾಳೆ. ಅಲ್ಲದೇ ಖಾಸಗಿ ಅಂಗದ ಮೇಲೆ ಚಾಕುವಿನಿಂದ ಗಾಯಗೊಳಿಸಿದ್ದಾಳೆ. ಈ ವೇಳೆ ನೋವು ತಾಳಲಾರದೇ ಆತ ಕಿರುಚಿಕೊಂಡು ಅಳುತ್ತಿದ್ದನು. ಗಂಡನನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾಳೆ ಎನ್ನುವುದು ವಿಡಿಯೋದಲ್ಲಿ ಕಂಡು ಬರುತ್ತದೆ ಎನ್ನಲಾಗಿದೆ.

ವ್ಯಕ್ತಿ ಮೊದಲು ಕೇಸ್ ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಂಡು ಕಳುಹಿಸಿದ್ದಾರೆ. ಆದರೆ ಆತನ ಹೆಂಡತಿಯನ್ನು ಅರೆಸ್ಟ್ ಮಾಡಿರಲಿಲ್ಲ. ಹೀಗಾಗಿ ನಂತರ ದಿನಗಳಲ್ಲಿಯು ಚಿತ್ರಹಿಂಸೆಗೆ ಗುರಿಯಾಗಿದ್ದನು. ಯಾವಾಗ ಸಿಸಿಟಿವಿ ದೃಶ್ಯ ಸಮೇತ ಬಂದು ಪೊಲೀಸರಿಗೆ ತೋರಿಸಿದಾಗ ಮಹಿಳೆಯನ್ನು ಬಿಜ್ನೋರ್ ನಗರದ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

Related Articles

Back to top button
error: Content is protected !!