ಇತರೆ

ತಂಗಿಯ ಕಣ್ಣೇದುರೇ ಅಣ್ಣ ಈಜುತ್ತಲೇ ಸಾವು: ಸಾವಿನ ದೃಶ್ಯ ಸೆರೆ ಹಿಡಿದ ತಂಗಿ!

Views: 379

ಕೃಷಿ ಹೊಂಡದಲ್ಲಿ ಈಜಲು ತೆರಳಿದ ವ್ಯಕ್ತಿಯೊಬ್ಬ ದಾರುಣ ಅಂತ್ಯ ಕಂಡ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ನಡೆದಿದೆ.

ಕೃಷಿ ಹೊಂಡದಲ್ಲಿ ಅಣ್ಣ ಈಜುವುದನ್ನು ತಂಗಿ ಮೊಬೈಲ್‌ನಲ್ಲಿ ವಿಡಿಯೊ ಮಾಡುವಾಗಲೇ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾನೆ.

ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್ ಗೌಡ (26) ಮೃತ ದುರ್ದೈವಿ.

ಗೌತಮ್‌ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದ. ಕುಟುಂಬದವರೊಂದಿಗೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ. ಒಂದು ಬದಿ ಮಕ್ಕಳಿಬ್ಬರು ಈಜುತ್ತಿದ್ದರು. ಈ ಕಡೆ ತಂಗಿಗೆ ಮೊಬೈಲ್‌ ಕೊಟ್ಟು ಈಜುವುದನ್ನು ವಿಡಿಯೊ ಮಾಡು ಎಂದು ಹೇಳಿ ಗೌತಮ್‌ ಕೃಷಿ ಹೊಂಡಕ್ಕೆ ಹಾರಿ ಈಜುತ್ತಿದ್ದ. ಇತ್ತ ತಂಗಿಯು ವಾಪಸ್‌ ಬಾ ಎಂದು ಕೂಗಿದ್ದಾಳೆ. ಆಕೆಯ ಮಾತನ್ನು ಕೇಳಿಸಿಕೊಳ್ಳದ ಗೌತಮ್‌ ಈಜುತ್ತಾ ಕೊಂಚ ದೂರ ಹೋಗಿದ್ದಾನೆ. ನೋಡ ನೋಡುತ್ತಿದ್ದಂತೆಯೇ ತಂಗಿಯ ಎದುರೇ ನೀರಿನಲ್ಲಿ ಉಸಿರುಗಟ್ಟಿ ಪ್ರಾಣಬಿಟ್ಟಿದ್ದಾನೆ.

ಈಜು ಬಾರದಿದ್ದ ಗೌತಮ್‌ ನೀರಿನಲ್ಲಿ ಮುಳುಗುತ್ತಿರುವ ಎಲ್ಲಾ  ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದೆ.ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!