ಇತರೆರಾಜಕೀಯ

ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರ ವಿರುದ್ಧ ಸುಳ್ಳು ಸುದ್ಧಿ ಜಾಲತಾಣದಲ್ಲಿ ವೈರಲ್..! ದೂರು ದಾಖಲು

Views: 91

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಕಾಂಗ್ರೆಸ್ ಪಕ್ಷದ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀನಿವಾಸ ಅಮೀನ್‌ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಿದು ಬಿಟ್ಟವರ ವಿರುದ್ಧ  ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಲೋಕಸಭಾ ಚುನಾವಣೆಯ ಮುನ್ನಾದಿನ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹಾಗೂ ಪೋಸ್ಟರ್ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ವೈರಲ್ ಆದ ವೀಡಿಯೋದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಾಂಗ್ರೆಸ್ ಪಕ್ಷದ ಸದಸ್ಯ ಹಾಗೂ ವಿರುದ್ಧ ಪಕ್ಷದ ನಾಯಕರಾದ ಶ್ರೀನಿವಾಸ ಅಮೀನ್‌ರವರು ಮೇಲ್ವರ್ಗದವರಿಗೆ ಬುದ್ದಿ ಕಲಿಸೋಣ ಎಂಬರ್ಥದ ಮಾತುಗಳನ್ನು ಆಡಿದ್ದಾರೆ ಹಾಗೂ ಅದನ್ನು ಪೋಸ್ಟರ್ ತರ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡಲಾಗಿತ್ತು. ಈ ಕುರಿತು ಇಂದು ಶ್ರಿನಿವಾಸ ಅಮೀನ್‌ರವರು ಉಡುಪಿ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಡಿಯೋ/ಪೋಸ್ಟರ್‌ಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಯಾರೆಲ್ಲ ವೈಯಕ್ತಿಕವಾಗಿ ಹಾಗೂ ಫೇಸ್ಬುಕ್, ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಂಡವರ ವಿವರಗಳೂ ಲಭ್ಯವಿದ್ದು, ಅವರ ಮೇಲೂ ತನಿಖೆಗೆ ಆದೇಶಿಸಿ ದೂರು ದಾಖಲಿಸಲಾಗಿದೆ.ಯಾವುದೇ ಆಧಾರವಿಲ್ಲದ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವ ವಿಶ್ವಾಸವ್ಯಕ್ತವಾಗಿದೆ.

Related Articles

Back to top button
error: Content is protected !!