ಇತರೆ

ಬಿಸಿಲಿನ ಬೇಗೆಗೆ ತಾಳಲಾರದೆ ಕೆರೆಯಲ್ಲಿ ಈಜಲು ತೆರಳಿದ ಮೂವರು ಬಾಲಕರು ಸಾವು

Views: 55

ಯಾದಗಿರಿ: ಕೆರೆಯಲ್ಲಿ ಈಜಲು ತೆರಳಿದ ಮೂವರು ಬಾಲಕರು ಮೃತಪಟ್ಟ ಘಟನೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರಲ್ಲಿ ಹಯಾಳಪ್ಪ (11), ಶರಣಬಸವ (10) ಹಾಗೂ ಅನಿಲ್ (10) ಎಂದು ಗುರುತಿಸಲಾಗಿದೆ.

ನಗನೂರ ಗ್ರಾಮದ ಇಬ್ಬರು, ಖಾನಾಪುರ ಗ್ರಾಮದ ಓರ್ವ ಬಾಲಕ ಸಾವನ್ನಪ್ಪಿದ್ದಾರೆ. ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಕೆರೆಗೆ ಈಜಲು ಹೋಗಿದ್ದಾಗ, ಕೆರೆಯ ಕೆಸರಿನಲ್ಲಿ ಕಾಲು ಸಿಲುಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕರ ಮೃತದೇಹ ಹೊರ ತೆಗೆದು ಶಹಾಪುರ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇನ್ನು, ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related Articles

Back to top button
error: Content is protected !!