ನೇಹಾ, ಫಯಾಜ್ ಪ್ರೀತಿ ಬಗ್ಗೆ ಬಿಚ್ಚಿಟ್ಟ ಹಂತಕನ ತಾಯಿ

Views: 233
ನೇಹಾಳನ್ನು ಇರಿದು ಕೊಂದ ಆರೋಪಿ ಫಯಾಜ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಮಗನ ಈ ಕೃತ್ಯಕ್ಕೆ ತಾಯಿ ಬೆಚ್ಚಿ ಬಿದ್ದಿದ್ದಾರೆ. ಆದರೆ ನೇಹಾಳೆ ಬಂದು ನನ್ನ ಮಗನ ಬಳಿ ನಂಬರ್ ತೆಗೆದುಕೊಂಡಿದ್ದಳು, ಫಯಾಜ್ನನ್ನು ತುಂಬಾ ಇಷ್ಟಪಡುತ್ತಿದ್ದಳು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಫಯಾಜ್ ತಾಯಿ, ನನ್ನ ಮಗ ಮಾಡಿರೋ ತಪ್ಪಿಗೆ ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ನೇಹಾಳ ತಂದೆ ತಾಯಿಗೂ ಕ್ಷಮೆ ಕೇಳುತ್ತೇನೆ. ಅವರ ತಂದೆ ತಾಯಿಗೆ ಎಷ್ಟು ದುಃಖ ಪಟ್ಟಿದ್ದಾರೋ ಅದೇ ರೀತಿ ನಮ್ಮ ಮಗ ಮಾಡಿರೋ ತಪ್ಪಿಗೆ ನಾವೂ ಕೂಡ ದುಃಖದಲ್ಲಿದ್ದೇವೆ. ಈ ಕಾನೂನು ಯಾವ ಶಿಕ್ಷೆಯಾಗಬೇಕೋ ಅದು ಆಗಲಿ.
ಇಬ್ಬರು ಒಬ್ಬರಿಗೊಬ್ಬರು ಬಹಳ ಪ್ರೀತಿಸುತ್ತಿದ್ದರು. ನನ್ನ ಮಗ ಕಾಲೇಜಿನಲ್ಲಿ ಅವನ ಪಾಡಿಗೇ ಅವನು ಇದ್ದ. ಜಿಮ್ ಬಾಡಿ ಬಿಲ್ಡರ್ ಆದ ಮೇಲೆ ಅವನು ಪೇಮಸ್ ಆಗಿದ್ದ. ಅವರು ಒಂದು ದಿನ ಕ್ಯಾಂಟೀನ್ನಲ್ಲಿ ಕುಳಿತುಕೊಂಡಾಗ ನೇಹಾಳೇ ಬಂದು ಫೋನ್ ನಂಬರ್ ತೆಗೆದುಕೊಂಡಿದ್ದಳು. ಅವನಿಗೆ ಜಿಮ್ ಬಾಡಿ ಬಿಲ್ಡರ್ ಆಗಿದ್ದಕ್ಕೆ ಎಲ್ಲರೂ ಸನ್ಮಾನ ಮಾಡುತ್ತಿದ್ದರು. ಬಳಿಕ ಮನೆಗೆ ಬಂದು ಮಮ್ಮಿ ನನಗೆ ಎಲ್ಲ ಹುಡುಗಿಯರು ಫುಲ್ ಫ್ಯಾನ್ಸ್ ಆಗಿ ಬಿಟ್ಟಿದ್ದಾರೆ. ನಂಬರ್ ತೆಗೆದುಕೊಂಡು ಫೋನ್ ಮಾಡಿ ವಿಶ್ ಮಾಡುತ್ತಿದ್ದಾರೆ. ಆದರೆ ನೇಹಾ ಎಂಬ ಹುಡುಗಿ ನನ್ನ ತುಂಬಾ ಇಷ್ಟ ಪಡುತ್ತಿದ್ದಾಳೆ ಅಂತಾ ನನ್ನ ಮುಂದೆ ಹೇಳಿಕೊಂಡಿದ್ದ. ಆದರೆ ನಾನು ಇದೆಲ್ಲಾ ಬೇಡ ಅಂತಾ ಹೇಳಿದ್ದಾರೆ. ಆದರೆ ಇದು ಒನ್ ಸೈಡ್ ಲವ್ ಆಗಿರಲಿಲ್ಲ. ಇಬ್ಬರು ಮದುವೆ ಆಗಬೇಕು ಅಂದುಕೊಂಡಿದ್ದರು. ನನ್ನ ಮಗ ತಪ್ಪು ಮಾಡಿದ್ದಾನೆ ಅಂದ್ರೆ ಅವನಿಗೆ ಶಿಕ್ಷೆ ಆಗಲೇಬೇಕು ಎಂದರು ಫಯಾಜ್ ತಾಯಿ.






