ಸಾಲಿಕೇರಿಯ ಶೇಡಿಕೆರೆ ದುರಸ್ತಿಗಾಗಿ ಆಗ್ರಹ

Views: 1
ಬೃಹ್ಮಾವರ : ಉಡುಪಿ ತಾಲೂಕಿನ ವಾರಂಬಳ್ಳಿ ಗ್ರಾಮದಲ್ಲಿ 8 ಶತಮಾನಗಳ ಇತಿಹಾಸವಿರುವ ಶೇಡಿಕೆರೆ,
ಸಾಲಿಕೇರಿ ಶ್ರೀ ಬೃಹ್ಮಲಿಂಗ ವೀರಭದ್ರ ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನದಿಂದ 500 ಮೀ ದೂರದ ಈ ಕೆರೆಯ ದುರಸ್ತಿಗಾಗಿ ಸಮಸ್ತ ಜನತೆಯ ಪರವಾಗಿ ಬೈಕಾಡಿ ಭಾಸ್ಕರ್ ಮನವಿ ಮಾಡಿಕೊಂಡಿದ್ದಾರೆ.
ಸಾಲಿಕೇರಿ ದೇವಳದ ಉತ್ಸವಕ್ಕೆ ಸಂಬಂಧಿಸಿದ ಈ ಕೆರೆಯು ಬಹಳ ಹಿಂದೆ ಮೇ ತಿಂಗಳ ಕೊನೆಯವರೆಗೂ ಧಾರಾಳವಾಗಿ ನೀರು ಸಂಗ್ರಹವಾಗಿ ಕೆರೆಯ ಸುತ್ತ ಮುತ್ತಲಿನ ಜನರಿಗೆ ಕೃಷಿ, ಉಪ ಬೆಳೆಗಳಿಗೆ ಕೆರೆಯ ನೀರು ಉಪಯೋಗವಾಗುತ್ತಿತ್ತು. ನೀರಿನ ಸಂಗ್ರಹದಿಂದ ಅಂತರ್ ಜಲ ವೃದ್ಧಿಯಿಂದ ಬಾವಿಗಳು ನೀರು ತುಂಬಿ ತುಳುಕುತ್ತಿತ್ತು.
ಆದರೆ, ಇತ್ತೀಚೆಗೆ ಈ ಕೆರೆಯಲ್ಲಿ ಅಂತರ್ ಗಂಗೆ, ಪಾಚಿ, ಹೂಳು ತುಂಬಿ ದುವಾ೯ಸನೆಯಿಂದ ಇಲ್ಲಿನ ಜನರಿಗೆ ರೋಗ ಹರಡುವ ಭೀತಿ ಉಂಟಾಗಿದೆ.
ಈ ಹಿಂದೆ ಸಾಲಿಕೇರಿ ನಾಗರಿಕರು ಕೆರೆಯು ಸಾವ೯ಜನಿಕರಿಗೆ ಉಪಯೋಗ ಬರುವಂತೆ ಕೆರೆಯನ್ನು ಸ್ವಚ್ಚಗೊಳಿಸಿ, ಆವರಣವನ್ನು ಕಟ್ಟಿಸಿ ಕೊಡಬೇಕೆಂದು ಜನಪ್ರತಿನಿಧಿಗಳಿಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.
ನೆನೆಗುದಿಗೆ ಬಿದ್ದ ಈ ಕೆರೆಯ ಬಗ್ಗೆ ಸಂಬಂಧ ಪಟ್ಟವರು ಗಮನಹರಿಸಿ ಇಲ್ಲಿನ ನಾಗರಿಕರಿಗೆ ಕೆರೆಯು ಪುನಃ ಉಪಯೋಗವಾಗಲಿ ಎಂಬುವುದು ಎಲ್ಲರ ಬೇಡಿಕೆಯಾಗಿದೆ.






