ಹರ್ಷಿಕಾ ಪೂಣಚ್ಚ -ಭುವನ್ ಪೊನ್ನಣ್ಣ ದಂಪತಿ ಮೇಲೆ ಪುಂಡರಿಂದ ಹಲ್ಲೆ..!!!

Views: 89
ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ -ಭುವನ್ ಪೊನ್ನಣ್ಣ ದಂಪತಿಗಳ ಮೇಲೆ ಪುಂಡರು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪುಲಿಕೇಶಿ ನಗರದ ಮಸೀದಿ ರಸ್ತೆಯ ಫ್ರೆಜರ್ ಟೌನ್ನ ರೆಸ್ಟೋರೆಂಟ್ ನಲ್ಲಿ ಊಟ ಮುಗಿಸಿ ವಾಪಸ್ ಬರುವ ವೇಳೆ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಕತ್ತಿನ ಪಟ್ಟಿ ಹಿಡಿದಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಭುವನ್ ಕೊರಳಿದ್ದ ಚಿನ್ನದ ಸರ ಕಿತ್ತಕೊಳ್ಳಲು ಯತ್ನಿಸಿದ್ದಾರೆಂದು ಆರೋಪಿಸಿದ್ದಾರೆ. ಅನಾವಶ್ಯಕವಾಗಿ ಜಗಳ ತೆಗೆದಿರುವ ಕಿಡಿಗೇಡಿಗಳು ಪುಂಡಾಟಿಕೆ ತೋರಿಸಿದ್ದಾರೆ.
ಘಟನೆ ಬಗ್ಗೆ ವಿವರಿಸಿದ ನಟಿ ಹರ್ಷಿಕಾ, ನಮ್ಮೂರಲ್ಲಿ ನಮಗೆ ರಕ್ಷಣೆ ಇಲ್ವಾ ಎಂದು ಪ್ರಶ್ಮಿಸಿದ್ದಾರೆ. ದೈಹಿಕ ಹಲ್ಲೆಗೂ ಮುಂದಾದರೂ ಎಂದು ದೂರಿದ್ದಾರೆ.
ಪಾರ್ಕಿಂಗ್ ನಿಂದ ಕಾರು ತೆಗೆಯುವಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಘಟನೆ ವೇಳೆ 20-30 ಜನರಿಂದ ಗ್ಯಾಂಗ್ ನಿಂದ ರಂಪಾಟ ನಡೆದಿದೆ. ಘಟನೆಯಿಂದ ಶಾಕ್ ಆಗಿರುವ ಹರ್ಷಿಕಾ ಪೂಣಚ್ಚ ದಂಪತಿಗಳು ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಘಟನೆಯ ಮಾಹಿತಿ ಶೇರ್ ಮಾಡಿದ್ದಾರೆ.






