ಹಾಲಾಡಿ ಶ್ರೀನಿವಾಸ ಶೆಟ್ಟಿ, ಮೊಳಹಳ್ಳಿ ದಿನೇಶ್ ಹೆಗ್ಡೆ ಅಭ್ಯಥಿ೯ಗಳು..?
ಕುಂದಾಪುರದ ವಿಧಾನ ಸಭಾ ಕ್ಷೇತ್ರ ಯಾನ

Views: 8
ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಯ ಕ್ಷಣ ಗಣನೆಯಲ್ಲಿರುವಾಗಲೇ ಚುನಾವಣೆಯ ಕಾವು ರಂಗೇರುತ್ತಿದೆ.
ಕುಂದಾಪುರದ ವಿಧಾನ ಸಭಾ ಸಾವ೯ತ್ರಿಕ ಚುನಾವಣಿಯಲ್ಲಿ ಇಲ್ಲಿಯವರೆಗೆ 71 ವಷ೯ಗಳ ರಾಜಕೀಯ ಇತಿಹಾಸದಲ್ಲಿ 65 ವಷ೯ಗಳ ಕಾಲ ಬಂಟ ಸಮುದಾಯದವರು ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿ ಮತ್ತು ಪಕ್ಷೇತರರಾಗಿ 24 ವಷ೯ಗಳ ಕಾಲ ವಿಧಾನ ಸಭಾ ಸದಸ್ಯರಾಗಿದ್ದಾರೆ.
ಬಿಜೆಪಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು 70 ರ ವಯೋಮಿತಿ ಮಾನದಂಡ ಬಂದರೆ ಈ ಭಾರಿ ಮತ್ತೆ ಪಕ್ಷೇತರರಾಗಿ ಹಾಲಾಡಿ ಸ್ಪಧಿ೯ಸಬಹುದು.
ಇಲ್ಲವೇ ತನ್ನ ಶಿಷ್ಯ ಕಿರಣ ಕೊಡ್ಗಿಯವರಿಗೆ ಬಿಜೆಪಿ ಅಭ್ಯಥಿ೯ತನಕ್ಕೆ ಬೆಂಬಲಿಸಬಹುದು.
ಇವರಿಬ್ಬರನ್ನು ಬಿಟ್ಟರೆ ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕಡಿಮೆ.
ಕಾಂಗ್ರೆಸ್ ನಿಂದ ಮಹಿಳಾ ಪ್ರಾತಿನಿಧ್ಯಕ್ಕಾಗಿ ನ್ಯಾಯವಾದಿ ಶ್ಯಾಮಲ ಭಂಡಾರಿ ಟಿಕೆಟ್ ಗಾಗಿ ಅಜಿ೯ ಸಲ್ಲಿಸಿದ್ದಾರೆ. ಬಿಲ್ಲವರ ಕೋಟಾದಡಿ ಯುವ ನಾಯಕ ಅಶೋಕ ಪೂಜಾರಿ, ಮತ್ತು ಕೊಳ್ಕೆಬೈಲು ಕಿಶನ್ ಹೆಗ್ಡೆ, ಈ ಹಿಂದೆ ಸ್ಪಧಿ೯ಸಿದ್ದ ಮಲ್ಯಾಡಿ ಶಿವರಾಮ ಶೆಟ್ಟಿ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಗಳಾದರೂ ಈ ಭಾರಿ ಯುವ ನಾಯಕರಿಗೆ ಟಿಕೆಟ್ ನೀಡಿದರೆ ಮೊಳಹಳ್ಳಿ ದಿನೇಶ್ ಹೆಗ್ಡೆ ಟಿಕೆಟ್ ಸ್ಪಧೆ೯ಯಲ್ಲಿ ಮುಂದಿದ್ದಾರೆ.
ಬಿಜೆಪಿಯಲ್ಲಿ ಯುವ ನಾಯಕರಾದ ಕಿರಣ ಕೊಡ್ಗಿಯವರಿಗೆ ಅವಕಾಶ ನೀಡಿದಲ್ಲಿ ಇವರಿಬ್ಬರ ಮಧ್ಯೆ ಚುನಾವಣಾ ಕಣದಲ್ಲಿ ನೇರ ಸ್ಪಧೆ೯ ಏಪ೯ಡಬಹುದು.
ಕಾಂಗ್ರೆಸ್ ನಿಂದ ದಿನೇಶ್ ಹೆಗ್ಡೆ ಹೆಸರು ಹೆಚ್ಚು ಪ್ರಚಲಿತವಾಗಿದ್ದು, ಅವರು ಈಗಾಗಲೇ ತಳ ಮಟ್ಟದ ಪಕ್ಷ ಸಂಘಟನೆಯಲ್ಲಿ ಕ್ಷೇತ್ರ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಯಲ್ಲಿ ರಾಜ್ಯಮಟ್ಟದ ಆಂತರಿಕ ಸಮೀಕ್ಷೆಯ ಪ್ರಕಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತದ ನಿರೀಕ್ಷೆ ಇಲ್ಲದೆ ಇರುವುದರಿಂದ ಕೊನೆ ಕ್ಷಣದಲ್ಲಿ ಎಲ್ಲಾ ಸಮೀಕ್ಷೆಗಳನ್ನು ಮೀರಿ ಹೊಸತೊಂದು ಅಲೆ ಸೃಷ್ಟಿಯಾದರೆ ಬಹುಮತದ ನಿರೀಕ್ಷೆಯಲ್ಲಿ ಎರಡು ಪಕ್ಷದವರು ಆಶಾ ಭಾವನೆಯಲ್ಲಿದ್ದಾರೆ.
ಎರಡು ಪಕ್ಷದಲ್ಲಿ ಟೆಕೆಟ್ ಆಕಾಂಕ್ಷಿಗಳಿದ್ದರೂ ಕೊನೆ ಕ್ಷಣದಲ್ಲಿ ಹಾಲಾಡಿ ಮತ್ತು ದಿನೇಶ್ ಹೆಗ್ಡೆ ಮಧ್ಯೆ ನೇರ ಸ್ಪಧೆ೯ ಎನ್ನುವುದು ರಾಜಕೀಯ ವಿಶ್ಲೇಷಣೆಗಾರರ ಅಭಿಪ್ರಾಯವಾಗಿದೆ.






