ಇತರೆ

ಮತ್ತೊಬ್ಬ ವ್ಯಕ್ತಿಯೊಂದಿಗೆ ಪತ್ನಿ ತಿರುಗಾಟ; ನಡು ರಸ್ತೆಯಲ್ಲೇ ಥಳಿಸಿದ ಪತಿ

Views: 139

ಹರಿಯಾಣ: ಕಾರಿನಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಪತ್ನಿ ತಿರುಗಾಟ ನಡೆಸುತ್ತಿರುವುದನ್ನು ಕಂಡು ಪತಿ ನಡು ರಸ್ತೆಯಲ್ಲೇ ಪತ್ನಿಗೆ ಮನಬಂದಂತೆ ಥಳಿಸಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ.

ಪಂಚಕುಲದ ಸೆಕ್ಟರ್ 26ರ ಉದ್ಯಾನವನದಲ್ಲಿ ಪತ್ನಿ ಬೇರೊಬ್ಬ ಪುರುಷನೊಂದಿಗೆ ಕಾರಿನಲ್ಲಿ ಒಟ್ಟಿಗೆ ಇರುವುದನ್ನು ಕಂಡು ಕೋಪಗೊಂಡ ಗಂಡ ನೇರವಾಗಿ ಬಂದು ಬ್ಯಾಟಿನಿಂದ ಕಾರಿನ ಗಾಜನ್ನು ಹೊಡೆದಿದ್ದಾನೆ. ಇದಲ್ಲದೇ ಪತ್ನಿಯನ್ನು ಕಾರಿನಿಂದ ಎಳೆದೊಯ್ದು ನಡು ರಸ್ತೆಯಲ್ಲೇ ಸ್ಥಳೀಯರ ಮುಂದೆ ಮನಬಂದಂತೆ ಥಳಿಸಿದ್ದಾನೆ. ಸದ್ಯ ಈ ಘಟನೆಯನ್ನು ಸ್ಥಳೀಯರು ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪೊಲೀಸರು ಘಟನೆಯ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ. ಪತ್ನಿಯ ದೂರಿನ ಆಧಾರದ ಮೇಲೆ ಪಂಚಕುಲದ ಸೆಕ್ಟರ್ 26ರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

 

 

Related Articles

Back to top button
error: Content is protected !!