ಜನಮನ
ವಕ್ವಾಡಿ ವಾರಾಹಿ ನೀರಾವರಿ ಯೋಜನೆಯ ಮನವಿಗೆ ಸ್ಪಂಧಿಸಿದ : ಶಾಸಕರು ಹಾಲಾಡಿ ಶ್ರೀನಿವಾಸ ಶೆಟ್ಟಿ

Views: 0
ಕುಂದಾಪುರ : ಇಲ್ಲಿನ 100 ಮನೆಗಳಿಗೆ, ಮತ್ತು 200 ಎಕರೆ ಭೂಮಿಗೆ ನೀರು ಹರಿಸುವ ಯೋಜನೆ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಕ್ವಾಡಿ ಗ್ರಾಮದ ತೆಂಕಬೆಟ್ಟುವಿನ ಕುಂದಾಪುರ ಮನೆ ಸಮೀಪ ವಾರಾಹಿ ನಾಲೆಯಿಂದ ಹೊಳೆಗೆ ಹರಿದು ಬರುವ ನೀರಿಗೆ ಏತ ನೀರಾವರಿ ಮೂಲಕ 10 ಎಚ್ .ಪಿ ಪಂಪ್ ನಿಂದ ನೀರು ಹರಿದು ಬಿಟ್ಟು, ಇಲ್ಲಿನ 1 ಕೀ.ಮೀ ದೂರದ ದೇವರಾಡಿ ದೇವಸ್ಥಾನದ ಹತ್ತಿರದ ಗುಂಡಿಗೆ ಹರಿಸಿ,
ಚರಂಡಿ ಮೂಲಕ ಪೂವ೯ ಮತ್ತು ಪಶ್ಚಿಮಾಭಿಮುಖವಾಗಿ ನೀರು ಹರಿದಾಗ ಅಂತರ್ ಜಲ ವೃದ್ಧಿಯಾಗಿ ಸಮಸ್ತ ವಕ್ವಾಡಿ ತೆಂಕಬೆಟ್ಟು ನಾಗರಿಕರಿಗೆ ನೀರಿನ ಸಮಸ್ಯೆ ಬಗೆ ಹರಿಯುತ್ತದೆ.
ವಕ್ವಾಡಿ ನಾಗರಿಕರು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆಗೆ ತೆರಳಿ ಸಲ್ಲಿಸಿದ ಮನವಿಗೆ. ಶಾಸಕರು ತತ್ ಕ್ಷಣ ಸ್ಪಂದಿಸಿ ಯೋಜನೆಯ ಚಾಲನೆಗೆ ಸಹಕಾರ ನೀಡಿದರು






