ಇತರೆ

ಮೂಡುಬಿದಿರೆ: ಪೋಕ್ಸೊ ಪ್ರಕರಣದಿಂದ ತಲೆಮರೆಸಿಕೊಂಡಿದ್ದ ಕಲ್ಲಮುಂಡ್ಕೂರು ಪ್ರೌಢಶಾಲೆಯ ಶಿಕ್ಷಕ ಸೆರೆ

Views: 53

ಮೂಡುಬಿದಿರೆ:  ಶಾಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಪೋಕ್ಸೊ ಪ್ರಕರಣ ಎದುರಿಸಿ ತಲೆಮರೆಸಿಕೊಂಡಿದ್ದ ಆರೋಪಿ ಕಲ್ಲಮುಂಡ್ಕೂರು ಪ್ರೌಢಶಾಲೆಯ ಶಿಕ್ಷಕ ಗುರು ಎಂ.ಪಿ.ಯನ್ನು  ಪೊಲೀಸರು ಬಂಧಿಸಿದ್ದಾರೆ.

ಪೋಕ್ಸೊ ಪ್ರಕರಣದಿಂದಾಗಿ ಶಾಲೆಯಿಂದ ಅಮಾನತುಗೊಂಡಿದ್ದ ಆರೋಪಿ ಗುರು ಇತ್ತೀಚೆಗೆ ಜಿಲ್ಲಾ ಸೆಶನ್ಸ್‌ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು.

ಶಾಲೆಯ ಕೆಲವು ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷಕ ಗುರು ವಿರುದ್ಧ ಸಂತ್ರಸ್ತ ವಿದ್ಯಾರ್ಥಿನಿಯರು ,ಅವರ ಹೆತ್ತವರು ಮತ್ತು ಶಾಲಾ ಮುಖ್ಯ ಶಿಕ್ಷಕರು ಮೂಡುಬಿದಿರೆ ಪೊಲೀಸ್‌ ಠಾಣೆಗೆ ನೀಡಿದ ದೂರಿನ ಪ್ರಕಾರ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು.

ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಕಲ್ಲಮುಂಡ್ಕೂರಿನಲ್ಲಿ ನಾಗರಿಕರು ಪ್ರತಿಭಟನೆಗೂ ಸಿದ್ಧತೆ ನಡೆಸಿದ್ದರು. ಪ್ರಕರಣವನ್ನು ಹೆಚ್ಚಿನ ತನಿಖೆಗೆ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿತ್ತು. ಮೂಡುಬಿದಿರೆ ಪೊಲೀಸರು ಹಾಗೂ ಮಂಗಳೂರು ಮಹಿಳಾ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯು ಪ್ರತಿಭಾನ್ವಿತ ಶಿಕ್ಷಕರಾಗಿದ್ದು,ಶಾಲೆ, ಸಾರ್ವಜನಿಕ ಕ್ಷೇತ್ರದಲ್ಲಿ, ಕಲೆ, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

Related Articles

Back to top button
error: Content is protected !!