ಇತರೆ
ರಸ್ತೆ ಸರಿ ಇಲ್ಲ, ಆಂಬ್ಯುಲೆನ್ಸ್ ಬರಲು ಹಿಂದೇಟು, ಗರ್ಭಿಣಿಯನ್ನು ಹೊತ್ತೊಯ್ಯುತ್ತಿರುವಾಗ ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ..!

Views: 94
ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ, ಆಂಧ್ರಪ್ರದೇಶದಲ್ಲಿ ನಡೆದಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೆದಕೋಟ ಪಂಚಾಯತ್‌ನ ಚೀಡಿವಲಸ ಎಂಬಲ್ಲಿ ಮಹಿಳೆ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.
ವಸಂತಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬ ಸದಸ್ಯರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು, ಗ್ರಾಮಕ್ಕೆ ಬರಲು ರಸ್ತೆ ಸರಿ ಇಲ್ಲದ ಕಾರಣ ಆಂಬ್ಯುಲೆನ್ಸ್ ಗ್ರಾಮದಿಂದ ಸುಮಾರು 1 ಕಿಮೀ ದೂರದಲ್ಲಿರುವ ರಸ್ತೆಯವರೆಗೆ ಮಾತ್ರ ಬಂದಿತ್ತು.
ಪತಿ ಭಾಸ್ಕರ ರಾವ್ ಮತ್ತು ಗ್ರಾಮದ ಕೆಲವು ಮಹಿಳೆಯರು ಗರ್ಭಿಣಿ ಮಹಿಳೆಯನ್ನು, ಎತ್ತಿಕೊಂಡು ಹಳ್ಳಿಯಿಂದ ಕಾಲು ದಾರಿಯಲ್ಲಿ ಆಂಬ್ಯುಲೆನ್ಸ್ ಇರುವಲ್ಲಿಗೆ ಹೊತ್ತೊಯ್ಯುತ್ತಿದ್ದರು.ಹೆರಿಗೆ ನೋವು ತಾಳಲಾರದೇ ಈ ವೇಳೆ ರಸ್ತೆಯಲ್ಲೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಮಹಿಳೆಯನ್ನು ಹುಕುಂಪೇಟೆಯ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ನಲ್ಲಿ ಕರೆತರಲಾಯಿತು.






