ಇನ್ಮುಂದೆ UPI ಮೂಲಕ ನಗದು ಠೇವಣಿ ಸೌಲಭ್ಯ;ರಿಸರ್ವ್ ಬ್ಯಾಂಕ್

Views: 44
ನವದೆಹಲಿ: ಎಟಿಎಂ ಕೇಂದ್ರಗಳಲ್ಲಿ ಯುಪಿಐ ಆಧಾರಿತ ನಗದು ಠೇವಣಿ ಸೌಲಭ್ಯವನ್ನು ಜಾರಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.
ಬಿಲ್ ಪಾವತಿ, ವ್ಯಾಪಾರ ವಹಿವಾಟು ಮತ್ತು ಇತರೆ ಡಿಜಿಟಲ್ ಪಾವತಿಗಳಿಗೆ ಸದ್ಯ ಯುಪಿಐ ಬಳಸಲಾಗುತ್ತಿದೆ. ಇನ್ನು ಮುಂದೆ ಇದರ ಮೂಲಕ ಬ್ಯಾಂಕ್ಗಳಿಗೆ ನಗದು ಠೇವಣಿ ಮಾಡುವ ವ್ಯವಸ್ಥೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಪ್ರಸ್ತುತ ಎಟಿಎಂ ಯಂತ್ರಗಳ ಮೂಲಕ ಡೆಬಿಟ್ ಕಾರ್ಡ್ ಬಳಸಿ ನಗದು ಠೇವಣಿ ಮಾಡಲಾಗುತ್ತಿದೆ. ಈ ವೇಳೆ ಗ್ರಾಹಕರು ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಬೇಕಿದೆ. ಈ ಹೊಸ ವ್ಯವಸ್ಥೆಯಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಜೊತೆಗೆ, ಬ್ಯಾಂಕ್ಗಳ ಕರೆನ್ಸಿ ನಿರ್ವಹಣಾ ಪ್ರಕ್ರಿಯೆಯು ಸುಗಮವಾಗಲಿದೆ ಎಂದು ಹೇಳಿದ್ದಾರೆ.
ಯುಪಿಐ ಮೂಲಕ ಹಣ ಜಮೆ ಹೇಗೆ?
ಕ್ಯಾಶ್ ಡೆಪಾಸಿಟ್ ಮೆಷಿನ್ ಗಳ ಮೂಲಕ ಈ ಪ್ರಕ್ರಿಯೆ ನಡೆಸಬೇಕಾಗುತ್ತದೆ ಪ್ರಸ್ತುತ ಡೆಬಿಟ್ ಕಾರ್ಡ್ ಮೂಲಕ ಹಣ ಡೆಬಿಟ್ ಮಾಡಬೇಕೆಂದರೆ ನೀವು ಮೊದಲು ನಿಮ್ಮ ಕಾರ್ಡ್ ಹಾಕಿ ಪಿನ್ ನಮೂದಿಸಿ ಡೆಪಾಸಿಟ್ ಆಯ್ಕೆಯನ್ನು ಒತ್ತಿ ನಗದನ್ನು ಜಮೆ ಮಾಡುತ್ತೀರಿ ಯುಪಿಎ ಮೂಲಕ ಹಣ ಜಮೆ ಮಾಡುದಿದ್ದರೆ ಡೆಬಿಟ್ ಕಾರ್ಡ್ ನ ಬಳಕೆಯ ಬದಲಾಗಿ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವ ಯುಪಿಐ ಬಳಸಿ ಡೆಪಾಸಿಟ್ ಮಾಡಬೇಕಾಗುತ್ತದೆ.






