ರಾಜಕೀಯ

ಕುಂದಾಪುರ ವಿಧಾನ ಸಭಾ ಕ್ಷೇತ್ರ ಯಾನ

Views: 2

1957 ಪ್ರಥಮ ಸಾವ೯ತ್ರಿಕ ಚುನಾವಣೆ

ವಕ್ವಾಡಿ ಶ್ರೀನಿವಾಸ ಶೆಟ್ಟಿ ಇವರಿಂದ ಆರಂಭಗೊಂಡು ಹಾಲಾಡಿ ಶ್ರೀನಿವಾಸ ಶೆಟ್ಟಿ ವರೆಗೆ

ಕುಂದಾಪುರ ವಿಧಾನ ಸಭಾ ಕ್ಷೇತ್ರದ ಇತಿಹಾಸದಲ್ಲಿ 1952 ರಿಂದ 2023 ರ ವರೆಗಿನ 71 ವಷ೯ಗಳ ರಾಜಕೀಯ ಇತಿಹಾಸದಲ್ಲಿ 5 ವಷ೯ ಮಾತ್ರ ವಿನ್ನಿ ಫ್ರೆಡ್ ಫೆನಾ೯ಂಡಿಸ್ ವಿಧಾನ ಸಭಾ ಸದಸ್ಯರಾಗಿದ್ದರು. ಉಳಿದ ಅವಧಿಯಲ್ಲಿ ಬಂಟ ಸಮುದಾಯದವರು ಈ ಕ್ಷೇತ್ರವನ್ನು ಪ್ರತಿನಿಧಿಸಿ ಜಯ ಸಾಧಿಸಿದ್ದಾರೆ. 24 ವಷ೯ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಮತ್ತು ಪಕ್ಷೇತರರಾಗಿ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ.ಕಾಂಗ್ರೆಸ್ ನಿಂದ ಪ್ರತಾಪ ಚಂದ್ರ ಶೆಟ್ಟಿ 16 ವಷ೯ಗಳ ಕಾಲ 4 ಭಾರಿ ವಿಧಾನ ಸಭಾ ಸದಸ್ಯರಾಗಿದ್ದಾರೆ. ಅವರು ಮೂರು ಭಾರಿ ವಿಧಾನ ಪರಿಷತ್ ಸದಸ್ಯರಾಗಿ, ಮೇಲ್ಮನೆಯ ಸಭಾಪತಿಯಾಗಿ ಉನ್ನತ ಹುದ್ದೆಯನ್ನು ಆಲಂಕರಿಸಿದ್ದರು. ಬಿಟ್ಟರೆ ಇಲ್ಲಿಯವರೆಗೆ ಕುಂದಾಪುರ ಕ್ಷೇತ್ರಕ್ಕೆ ಸಚಿವ ಸ್ಥಾನದ ಕನಸು ಈಡೇರಲಿಲ್ಲ.
ಕರಾವಳಿಯ ಭಾಗ ಮದ್ರಾಸ್ ಪ್ರಾಂತ್ಯದಲ್ಲಿದ್ದಾಗ 1952 ರಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿ ಅವರು ವಿಧಾನ ಸಭೆಗೆ ಅವಿರೋದವಾಗಿ ಆಯ್ಕೆಯಾಗಿದ್ದರು.
ಭಾಷಾವಾರು ಪ್ರಾಂತ್ಯ ರಚನೆಯಾಗಿ ಮೈಸೂರು ರಾಜ್ಯಕ್ಕೆ ಸೇರಿದಾಗ 1957 ರಲ್ಲಿ ಪ್ರಥಮ ಶಾಸಕರಾಗಿ ವಕ್ವಾಡಿ ಶ್ರೀನಿವಾಸ ಶೆಟ್ಟಿ ಅವರು ಪ್ರಜಾ ಸೋಶಿಯಲಿಸ್ಪ್ ಪಾಟಿ೯ಯಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದರು. 1962 ರಲ್ಲಿ ಕಾಂಗ್ರೆಸ್ ನಿಂದ ಎಸ್. ಎಸ್. ಕೊಳ್ಕೆಬೈಲು 1967 ರಲ್ಲಿ ಪ್ರಜಾ ಸೋಶಿಯಲಿಸ್ಪ್ ಪಾಟಿ೯ಯಿಂದ ವಿನ್ನಿ ಫ್ರೆಡ್ ಫೆನಾ೯ಂಡಿಸ್ ಮತ್ತೆ 1972 ರಲ್ಲಿನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದಾರೆ. 1978 ರಲ್ಲಿ ಜನತಾ ಪಾಟಿ೯ಯಿಂದ ಕಾಪು ಸಂಜೀವ ಶೆಟ್ಟಿ ಕಾಂಗ್ರೆಸ್ ವಿರುದ್ದ ಜಯ ಸಾಧಿಸಿದ್ದಾರೆ. 1983, 85, 89, 1994 ರವರೆಗೆ ಕಾಂಗ್ರೆಸ್ ನಿಂದ ಪ್ರತಾಪ ಚಂದ್ರ ಶೆಟ್ಟಿ ಅವರು ಕ್ರಮವಾಗಿ ಮಾಣಿ ಗೋಪಾಲ, ಅಪ್ಪಣ್ಣ ಹೆಗ್ಡೆ, ಗೋವುವದ೯ನ, ಎ. ಜಿ. ಕೊಡ್ಗಿ ವಿರುದ್ಧ ಜಯ ಸಾಧಿಸಿದ್ದರು. 1999 ರಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿ ಪಕ್ಷದಿಂದ ಪ್ರತಾಪ ಚಂದ್ರ ಶೆಟ್ಟಿ ವಿರುದ್ಧ ಜಯ ಸಾಧಿಸಿದ್ದಾರೆ. ಮತ್ತೆ ಮತ್ತೆ ಹಾಲಾಡಿಯವರು 2004 ರಲ್ಲಿ ಕಾಂಗ್ರೆಸ್ ನ ಅಶೋಕ ಕುಮಾರ್ ಹೆಗ್ಡೆ 2008 ರಲ್ಲಿ ಕಾಂಗ್ರೆಸ್ ನಿಂದ ಜಯ ಪ್ರಕಾಶ್‌ ಹೆಗ್ಡೆ 2013 ರಲ್ಲಿ ಪಕ್ಷೇತರರಾಗಿ ಮಲ್ಯಾಡಿ ಶಿವರಾಮ ಶೆಟ್ಟಿ 2018 ರಲ್ಲಿ ಕಾಂಗ್ರೆಸ್ ನ ರಾಕೇಶ್ ಮಲ್ಲಿ ವಿರುದ್ಧ ಜಯ ಸಾಧಿಸಿದ್ದಾರೆ.

2023 ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಪಕ್ಷಗಳಿಗೆ ಸವಾಲು ಅದೃಷ್ಟ ಪರೀಕ್ಷೆಯ ಕಣವಾಗಿದೆ. ದೀಘ೯ ಕಾಲದ ವಾರಾಹಿ ನೀರಾವರಿ ಯೋಜನೆ, ಸರಕಾರಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಯುವಜನರಿಗೆ ಈ ಕ್ಷೇತ್ರದಲ್ಲಿ ಉದ್ಯೋಗ ನಿವ೯ಹಿಸಲು ದೊಡ್ಡ ದೊಡ್ಡ ಕಂಪೆನಿಗಳನ್ನು ಸ್ಥಾಪಿಸುವ ಯೋಜನೆಯ ಆಶ್ವಾಸನೆಗಳ ಮಹಾಪೂರಕ್ಕೆ ಯಾರು ಸ್ಫಂದಿಸುತ್ತಾರೆ ಎಂಬುದಕ್ಕೆ ಮತದಾರರು ಕಾಯುತ್ತಿದ್ದಾರೆ.

       –ಸುಧಾಕರ ವಕ್ವಾಡಿ

ರಾಜಕೀಯ ಶಾಸ್ತ್ರ ಉಪನ್ಯಾಸಕರು

Related Articles

Back to top button
error: Content is protected !!