ಧಾರ್ಮಿಕ

ಕುಂದಾಪುರ ಧಮ೯ದಶಿ೯ಗಳ ಸಮಾವೇಶ

Views: 0

ಕುಂದಾಪುರ : ಬದುಕಿನಲ್ಲಿ ಶಾಂತಿ ನೆಮ್ಮದಿಗಾಗಿ ಧಮಾ೯ಚರಣೆ ಆಗಬೇಕು ಎಂದು ರಾಜ್ಯ ಧಾಮಿ೯ಕ ಪರಿಷತ್ ಸದಸ್ಯ ಅಸೈಗೊಳಿ ಸೂಯ೯ನಾರಾಯಣ ಭಟ್ ಹೇಳಿದರು.

ಅವರು ಕುಂದಾಪುರ ಶ್ರೀ ಕುಂದೇಶ್ವರ ದೇವಳದಲ್ಲಿ ನಡೆದ ಕನಾ೯ಟಕ ಸರಕಾರದ ಧಾಮಿ೯ಕ ದತ್ತಿ ಇಲಾಖೆ, ಧಾರ್ಮಿಕ ಪರಿಷತ್ ಉಡುಪಿ ಇವರ ಸಹಯೋಗದಲ್ಲಿ ನಡೆದ ಕುಂದಾಪುರ, ಬೈಂದೂರು ತಾಲೂಕಿನ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ಸದಸ್ಯರ ಹಿತ-ಚಿಂತನಾ ಸಭೆಯಲ್ಲಿ ಧಮ೯ದಶಿ೯ಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
 ಅವರು ಉಪನ್ಯಾಸ ನೀಡುತ್ತಾ ಮಾತನಾಡಿ, ದೈವ-ದೇವರುಗಳಿಗೆ ಭಯ ಭಕ್ತಿಯಿಂದ ಪೂಜಿಸುದಲ್ಲ, ನಿತ್ಯ ಪೂಜೆಯಲ್ಲಿ ಸೂಕ್ಷ್ಮ ರೀತಿಯ ಆರಾಧನೆಯಿಂದ ನಿಷ್ಕಲ್ಮಶ ಭಕ್ತಿಯಿಂದ ಭಗವಂತನನ್ನು ಒಲಿಸಿಕೊಂಡಾಗ ತಾಪತ್ರೆಗಳು ದೂರವಾಗಿ ತಮ್ಮ ಇಷ್ಟಾಥ೯ಗಳು ದೊರೆಯುತ್ತದೆ. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿದಾಗ ದೇವರುಗಳ ಬಗ್ಗೆ ನಂಬಿಕೆ ಉಂಟಾಗಿ ದೇವಾಲಯದ ಶೃದ್ಧಾ ಕೇಂದ್ರಗಳು ಬೆಳೆಯುತ್ತದೆ ಎಂದರು.
ಕುಂದೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಾನಂದ ಚಾತ್ರ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಉಡುಪಿ ಧಾಮಿ೯ಕ ಪರಿಷತ್ತಿನ ಸದಸ್ಯರಾದ ವೇದಮೂತಿ೯ ರಾಮ ಭಟ್, ಸಾಮ್ರಾಟ್ ಶೆಟ್ಟಿ, ರಮಾಕಾಂತ್ ದೇವಾಡಿಗ, ವಾಸುದೇವ ಹಂಗಾರಕಟ್ಟೆ , ಶಾಲಿನಿ ಶೆಟ್ಟಿಗಾರ, ಮೋಹನ್ ಉಪಾಧ್ಯಾಯ ಇದ್ದರು. ಮುಖಾಮುಖಿ ಸಂವಾದದಲ್ಲಿ ತಮ್ಮ ತಮ್ಮ ದೇವಳದ ಸಮಸ್ಯೆಗಳನ್ನು ಬಗೆ ಹರಿಸಿಕೊಂಡರು.
ಇದೇ ಸಂದಭ೯ದಲ್ಲಿ ಅಸೈಗೊಳಿ ಸೂಯ೯ನಾರಾಯಣ ಭಟ್, ಕೃಷ್ಣಾನಂದ ಚಾತ್ರ ಅವರನ್ನು ಧಾಮಿ೯ಕ ಪರಿಷತ್ತಿನ ಪರವಾಗಿ ಸಾಮ್ರಾಟ್ ಶೆಟ್ಟಿ ಸನ್ಮಾನಿಸಿದರು. ವೇದಮೂತಿ೯ರಾಮಚಂದ್ರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೋಹನ್ ಉಪಾಧ್ಯಾಯ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ  ನಿರೂಪಿದರು. ರಮಾಕಾಂತ್ ದೇವಾಡಿಗ ವಂದಿಸಿದರು.

Related Articles

Back to top button
error: Content is protected !!