Views: 0

ಕುಂದಾಪುರ : ಮಾನವೀಯ ಸೇವಾಕಾಯ೯ದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಬದುಕನ್ನು ಕಟ್ಟಿ ಕೊಡುತ್ತಿರುವ, ಕೊಡುಗೆಗಳ ಸುರಿಮಳೆ ನೀಡುತ್ತಿರುವ ಸಮಾಜ ಸೇವಾ ಸಂಸ್ಥೆಗೆ ಅಭಿನಂದನೆಗಳು ಎಂದು ಜಿಲ್ಲಾ ಗೌವರ್ನರ್ ಡಾ. ಎಂ. ಕೆ. ಭಟ್ ಹೇಳಿದರು.
ಅವರು ಕುಂದಾಪುರ ಲಯನ್ಸ್ ಕ್ಲಬ್ ಗೆ ಅಧಿಕೃತ ಬೇಟಿ ನೀಡಿ, ವಿವಿಧ ಫಲಾನುಭವಿಗಳಿಗೆ ನೆರವು ನೀಡುವ ಕಾರ೯ಕೃಮದಲ್ಲಿ ಭಾಗಿಯಾಗಿ ಮಾತನಾಡಿದರು.
ಕುಂದಾಪುರ ಕೊಯಾಕುಟ್ಟಿ ಹಾಲ್ ನಲ್ಲಿ ನಡೆದ ಕಾಯ೯ಕೃಮದಲ್ಲಿ ನವೀನ್. ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌವರ್ನರ್ ಎಂ. ಕೆ. ಭಟ್ ಮಾತನಾಡುತ್ತಾ, ನಾನು ನನ್ನದು ಎಂಬ ಭಾವಬಿಟ್ಟು ನನ್ನದಲ್ಲ ಎಂಬ ಮನೋಭಾವದಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆಯಿಂದ ಸಾಥ೯ಕ ಬದುಕು ನಮ್ಮದಾಗಬೇಕು ಎಂದು ತಿಳಿ ಹೇಳಿದರು.
ಕಾಯಿಲೆಯಿಂದ ನಡೆಯಲು ಸಾದ್ಯವಾಗದ ಶರತ್ ಕುಮಾರ್ ಅವರಿಗೆ ವೀಲ್ ಚಯರ್, ಹೊಲಿಗೆ ಯಂತ್ರ ವಿತರಣೆ, ರಕ್ತದಾನಕ್ಕೆ ಸಹಾಯ, ವಿಶೇಷ ಮಕ್ಕಳ ಶಾಲೆಗೆ ನೆರವು, ಅಶಕ್ತರಿಗೆ, ವಿವಿಧ ಶಾಲಾ ಕಾಲೇಜುಗಳಿಗೆ ಅನ್ನಧಾನ ಮತ್ತು ಪರಿಕರಗಳನ್ನು ಖರೀದಿಸಲು ಸಹಾಯಧನ ವಿತರಿಸಲಾಯಿತು.
ಸಭೆಯಲ್ಲಿ ಕಿರಣ್ ಕುಂದಾಪುರ, ಪ್ರಕಾಶ್ ಸೋನ್ಸ್, ರಾಧಾಕೃಷ್ಣ ನಾಯಕ್, ಜಯಕರ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
ಕ್ಲಬ್ ನ ಅಧ್ಯಕ್ಷ ನವೀನ್. ಕೆ. ಶೆಟ್ಟಿ ಅವರು ಸ್ವಾಗತಿಸಿದರು. ಕಾಯ೯ದಶಿ೯ ರಾಜೇಂದ್ರ ಅವರು ವರದಿ ವಾಚಿಸಿದರು. ರಮಾನಂದ ನಿರೂಪಿದರು.
|
ReplyForward
|






