ಜನಮನ

ಶ್ರೀ ಸುಧಾಕರ ವಕ್ವಾಡಿ 

Views: 5

ಶ್ರೀ ಸುಧಾಕರ ವಕ್ವಾಡಿ  ಅವರು ನಾಟಕ ರಂಗದಿಂದ  ತುಳು ಚಿತ್ರರಂಗದವರೆಗೂ ಗುರುತಿಸಿ ಕೊಂಡಿರುವ  ಪ್ರತಿಭಾವಂತ ನಟರಾಗಿರುತ್ತಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ನಿವಾಸಿ  ಶ್ರೀ ಸುಧಾಕರ ವಕ್ವಾಡಿ  ಅವರು ನಾಟಕ ರಂಗದಿಂದ  ತುಳು ಚಿತ್ರರಂಗದವರೆಗೂ ಗುರುತಿಸಿ ಕೊಂಡಿರುವ  ಪ್ರತಿಭಾವಂತ ನಟರಾಗಿರುತ್ತಾರೆ. MA BEd ಪದವೀದರಾಗಿ, ರಂಗಭೂಮಿ ಮತ್ತು  ಪತ್ರಿಕೋದ್ಯಮದಲ್ಲಿ ತರಬೇತಿ ಪಡೆದು, ಕುಂದಾಪುರದ  ಸರಕಾರಿ ಪದವಿ ಕಾಲೇಜು, ಕೋಟ ಪದವಿ ಕಾಲೇಜು, ಬೈಂದೂರು ತಾಲೂಕಿನ ಉಪ್ಪುಂದ, ಕಂಬದಕೋಣೆ   ಪದವಿ ಪೂವ೯ ಕಾಲೇಜಿನಲ್ಲಿ  ರಾಜ್ಯ ಶಾಸ್ತ್ರ ಉಪನ್ಯಾಸಕರಾಗಿ, ಹೆಮ್ಮಾಡಿ ಜನತಾ ಪದವಿ ಪೂವ೯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಶಾಲಾ ಕಾಲೇಜಿನಲ್ಲಿ ಓದುತ್ತಿರುವಾಗ ನಾಟಕ ರಚನೆ, ಬರಹಗಾರನಾಗಿ, ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ ತಾಲೂಕಿನ  ಮುಖ್ಯ ವರದಿಗಾರನಾಗಿ  ಮುಂದುವರಿದು,ಮಂಜುವಾಣಿ ಸಹಿತ ರಾಜ್ಯಮಟ್ಟದ  ಹಲವಾರು ಪತ್ರಿಕೆಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದ್ದಾರೆ.

ಕುಂದಾಪುರದ ಖ್ಯಾತ ದಲಿತ ಸಾಹಿತಿ  ಹರಿದಾಸ ಕೆ. ಕೆ.  ಕಾಳಾವರ್ಕರ್  ಅವರ ಪ್ರಸಿದ್ಧ’ ಕಾಲ’ ನಾಟಕ ದಲ್ಲಿ 150 ಕ್ಕೂ ಹೆಚ್ಚು ಭಾರಿ ತಾಲೂಕು ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೂ ಕುಂದಕನ್ನಡ, ಕನ್ನಡ, ತುಳು, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಅಭಿನಯಿಸಿ ಉತ್ತಮ ನಟ ಪ್ರಶಸ್ತಿ ಪಡೆದಿರುತ್ತಾರೆ.

1992 ರಲ್ಲಿ ಡಾ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಮತ್ತು ಕುಂದಾಪುರದಲ್ಲಿ  ನಡೆದ ಕೊರಗರ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ   ‘ಕಾಲ ‘ನಾಟಕ  ಪ್ರದಶ೯ನಗೊಂಡಿತ್ತು.  ಈ ನಾಟಕವನ್ನು ವೀಕ್ಷಿಸಿದ ಚಿತ್ರ  ನಟ,  ನಿದೇ೯ಶಕ ರಾಜ್ ಬಲ್ಲಾಳ ಮತ್ತು ತಂಡದವರು ಈ ನಾಟಕವನ್ನು 1994ರಲ್ಲಿ ಕಲಾತ್ಮಕ ತುಳು ಚಲನಚಿತ್ರ  ಮಾಡಿದಾಗ  ಸುಧಾಕರ ವಕ್ವಾಡಿ ಯವರಿಗೆ ಗ್ರಾಮೀಣ ಪ್ರದೇಶದ ದಲಿತ  ನಾಯಕ ಮುದುಕನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಂತರ ಈ ಚಿತ್ರ ಪನೋರಮಕ್ಕೆ ಆಯ್ಕೆಯಾಗಿ, ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿದೆ.

ಅಷ್ಟಾಂಗ ಯೋಗದಲ್ಲಿ ತಲ್ಲೀನರಾಗಿ ಸಿದ್ದ ಸಮಾದಿ ಯೋಗದಲ್ಲಿ ಮುಂದುವರಿದು, ಪತಂಜಲಿ ಭಾರತ್ ಸ್ವಾಭಿಮಾನ ಟ್ರಸ್ಟ್  ನಲ್ಲಿ ಅಧ್ಯಕ್ಷ ರಾಗಿದ್ದುದಲ್ಲದೆ. ಮನೆಯ ಎದುರುಗಡೆ  ತುಳಸಿ ವನ  ನಿಮಿ೯ಸಿ, ಅದರ ಶುದ್ದ ಗಾಳಿ ಸೇವಿಸಿ ಮಾಡುವ ಪ್ರಾಣಾಯಕ್ಕೆ ಶಾಸ್ತ್ರೀಯ ಬೆಂಬಲದೊಂದಿಗೆ ಹಲವು ವಿಧದ ಪ್ರಾಣಾಯಾಮದಲ್ಲಿ  ತುಳಸಿ ಪ್ರಾಣಾಯಾಮವನ್ನು ಯೋಗ ಕ್ಷೇತ್ರಕ್ಕೆ ಸೇರಿಸಿದ್ದಾರೆ.

ಕನಾ೯ಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯವರು ಉ. ಕ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಹ್ಯಾದ್ರಿ ಆದಿವಾಸಿ ಕಲಾ ಮಹೋತ್ಸವದಲ್ಲಿ ‘ವಕ್ವಾಡಿ ಕೊರಗರ ಚುಣ್ಣನ ಕುಣಿತ ‘ಎಂಬ ಜಾನಪದ ನೃತ್ಯ ತಂಡಕ್ಕೆ ದ. ಕ. ಜಿಲ್ಲೆ

ಯಿಂದ  ಇವರು ನಾಯಕರಾಗಿ ಉತ್ತಮ ತಂಡ ಪುರಸ್ಕಾರ ಪಡೆದರು.

ವಿವಿಧ ಸಮಾಜ ಸೇವಾ ಸಂಘಟನೆಗಳಲ್ಲಿ ಸಕ್ರಿಯರಾಗಿ, 8ರಿಂದ 10 ಸಂಘದಲ್ಲಿ ಅಧ್ಯಕ್ಷರಾಗಿ, ಸಮಾಜ ಸೇವೆಯಲ್ಲಿ  ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇವರ ಪ್ರತಿಭೆಯನ್ನು ಗುರುತಿಸಿದ ಚಿತ್ರ ತಂಡದವರು ‘ಶಿಲ್ಪಿ ‘ತುಳು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.  ಪ್ರಸ್ತುತ ಅವರು  ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುಗಾ೯ಪರಮೇಶ್ವರಿ ದೇವಳದ ಮೂಲ ಕುಲ ದೇವಸ್ಥಾನದಲ್ಲಿ ಸಹಮೊಕ್ತೇಸರರಾಗಿದ್ದಾರೆ

Related Articles

Back to top button
error: Content is protected !!