ಶಿಕ್ಷಣ

ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ ಬೆನ್ನಲ್ಲೇ.. ಸರ್ಕಾರ ತೆಗೆದುಕೊಂಡ ಏಕಾಏಕಿ ನಿರ್ಧಾರಕ್ಕೆ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರು ಅತಂತ್ರ!

Views: 86

ಉಡುಪಿ: 2022ರಲ್ಲಿ ಕೆ.ಇ.ಎ ಅವರು ಹಿಂದೆ ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಿದಾಗ ಎಲ್ಲಿಯೂ ಪಿ.ಹೆಚ್.ಡಿ ಆಗಿರಲೇ ಬೇಕೆನ್ನುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕೇವಲ ನೆಟ್/ಸೆಟ್ ಇದ್ದರೆ ಸಾಕು ಎಂದಿದ್ದಾರೆ. ಅವರು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿ.ಹೆಚ್.ಡಿಯನ್ನು ಕಡ್ಡಾಯ ಮಾಡಿಲ್ಲ.ಆದರೆ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಹುದ್ದೆ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆಯವರು ತಮ್ಮದೇ ಮಾನದಂಡದ ಮೇಲೆ ಒಂದು ಸುತ್ತೋಲೆ ಹೊರಡಿಸಿದ್ದಾರೆ.

ಇಷ್ಟರವರೆಗೆ ದಾಖಲೆಗಳನ್ನು ಹಿಡಿದು ಖರ್ಚು ವೆಚ್ಚಗಳನ್ನು ಮಾಡಿಕೊಂಡು ಜಂಟಿ ನಿರ್ದೇಶಕರ ಕಛೇರಿ, ಎಂ.ಎಸ್ ಬಿಲ್ಡಿಂಗ್, ಕಾಲೇಜು ಶಿಕ್ಷಣ ಇಲಾಖೆ ಎಂದು ಚಪ್ಪಲಿ ಸವೆಸಿ ಕೊಂಡು ಓಡಾಡಿದ ಉಪನ್ಯಾಸಕರು ಕಷ್ಟವನ್ನು ಎದುರಿಸುವಂತೆ ಮಾಡಿದೆ.

2015ರ ಗೈಡ್ಲೈನ್ ಪ್ರಕಾರ ನೆಟ್ ಸೆಟ್ ಪದವಿ ಮಾನದಂಡವಾಗಿತ್ತು. 29.03.2023ರ ಸಂದರ್ಭದಲ್ಲಿ ಹೊಸ ನಿಯಮ ಮಾಡಿದೆ. ಪಿ.ಹೆಚ್.ಡಿಗೆ 25 ಅಂಕ ಮಾಡಿದೆ. ಕೆಲವು ಕಾಲೇಜಿನವರು ದಿನಪತ್ರಿಕೆಯಲ್ಲಿ ಹುದ್ದೆಗೆ ಜಾಹಿರಾತುಗಳನ್ನು ನೀಡಿತ್ತು. ಈಗಾಗಲೇ ನೆಟ್. ಸೆಟ್ ಮಾಡಿಕೊಂಡು ಹತ್ತಾರು ವರ್ಷಗಳ ಕಾಲ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ 1,500 ಉಪನ್ಯಾಸಕರು ಬೀದಿಗೆ ಬರುವಂತೆ ಮಾಡಿದೆ ಇಲಾಖೆ

ಹೆಚ್ಚಿನ ಉಪನ್ಯಾಸಕರು ವಯೋಮಿತಿ ಮೀರುವ ಸಂದರ್ಭದಲ್ಲಿದ್ದಾರೆ. ಕೆ.ಇ.ಎ ಮಾಡದ ಮಾನದಂಡ ಖಾಸಗಿ ಅನುದಾನಿತ ಕಾಲೇಜುಗಳಿಗೆ ಏಕೆ ಇಲ್ಲ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಇದು ಒಂದು ರೀತಿಯಲ್ಲಿ ಪ್ರಾಧ್ಯಾಪಕರ ಆನ್ಲೈನ್ ಆಯ್ಕೆ ಆದಂತಾಗಿದೆ. ಇಂಟರ್ವ್ಯೂವ್ ಗೆ ಕೇವಲ 10 ಅಂಕವಾಗಿದೆ. ಒಬ್ಬನ ಕಮ್ಯುನಿಕೇಶನ್ ಸ್ಕಿಲ್ ಕುರಿತು ಅಧ್ಯಯನ ನಡೆಸಲು ಸಂದರ್ಶನ ಬಹಳ ಮುಖ್ಯ. ಪಿ.ಹೆಚ್.ಡಿಯೇ ಮುಖ್ಯ ಅಲ್ಲ. ಈ ನಿಯಮದ ಪ್ರಕಾರ ಪಿ.ಹೆಚ್.ಡಿ ಪಡೆದವನೇ ನೇರವಾಗಿ ಉದ್ಯೋಗ ಪಡೆದುಕೊಳ್ಳುತ್ತಾನೆ. ಮೊದಲು ಖಾಸಗಿ ಅನುದಾನಿತ ಕಾಲೇಜಿನ ಆಡಳಿತ ಮಂಡಳಿಗೆ ಕನಿಷ್ಟ 50 ಅಂಕಗಳನ್ನು ಸಂದರ್ಶನಕ್ಕೆ ನೀಡಿತ್ತು. ಆದರೆ ಈಗ ಕಾಲೇಜು ಆಡಳಿತ ಮಂಡಳಿಗೆ ಸಂದರ್ಶನಕ್ಕೆ 10 ಅಂಕ ಮಾತ್ರ ನೀಡಿದೆ. ಈ ಆದೇಶವು ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿರುವಾಗ ಮಾಡಲಾಗಿದೆ ಎನ್ನುವ ದೂರು ಕೇಳಿ ಬರುತ್ತಿದೆ. ಇದು ಸರ್ಕಾರ ತೆಗೆದುಕೊಂಡ ಏಕಾಏಕಿ ನಿರ್ಧಾರವಾಗಿದೆ.

ಕೆಲವು ಕಾಲೇಜಿನವರು ಈ ಆದೇಶದಂತೆ ಸಂದರ್ಶನ ನೆಡೆಸಿದೆ. ಕೆಲವು ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ಕೇಸ್ ದಾಖಲು ಮಾಡಿದ್ದಾರೆ.ಇನ್ನು ಕೆಲವು ಅಭ್ಯರ್ಥಿಗಳು ಕೆಲಸ ಬಿಟ್ಟು ತೆರಳಿದ್ದಾರೆ. ಈ ನಿಯಮವನ್ನು ಬದಲಿಸದಿದ್ದರೆ ಉಪನ್ಯಾಸಕರು ದೀರ್ಘವಾದ ಸಮಸ್ಯೆ ಎದುರಿಸುವಂತಾಗಿದೆ.ಇದು ಸರ್ಕಾರ ಮತ್ತು ಆಡಳಿತ ಮಂಡಳಿಯ ಪ್ರಶ್ನೆ ಅಲ್ಲ. ಅದರ ನಡುವೆ ಹುದ್ದೆ ಖಾಯಂ ಆಗುತ್ತದೆಂದು ನಿರೀಕ್ಷೆಯಲ್ಲಿರುವ ಬಡ ರೈತ ಮತ್ತು ಕಾರ್ಮಿಕರ ಮಕ್ಕಳು ಕಾದು ಕುಳಿತ್ತಿದ್ದಾರೆ.ಯು.ಜಿ.ಸಿ ಯು ಪಿ.ಹೆಚ್.ಡಿ ಯನ್ನು ಕಡ್ಡಾಯ ಮಾಡಲಿಲ್ಲ ಎಂದು ಅಭ್ಯರ್ಥಿಗಳು ಪ್ರಶ್ನೆ ಮಾಡಿದ್ದಕ್ಕೆ ಇದೀಗ ಹೊಸ ಆದೇಶದಲ್ಲಿ 15 ಅಂಕ ಮಾಡಿದೆ. ಹಳೆಯ ನಿಮಯವಿದ್ದರೆ ಏನಾದೀತು? ಹಿಂದೆ ಸೇವೆ ಮಾಡಿದವರಿಗೆ ಅವಕಾಶ ಕೊಟ್ಟು ಮುಂದೆ ನಿಯಮ ಬದಲಿಸ ಬಹುದು. ಸ್ನಾತಕೋತ್ತರ ಪದವಿ ಮಾಡಿ ನೆಟ್,ಸೆಟ್ ಮಾಡಿದವರು ಬುದ್ಧಿವಂತರಲ್ಲ, ಪಿ.ಹೆಚ್.ಡಿ ಮಾಡಿದವರು ಬುದ್ಧಿವಂತರೆನ್ನುವ ಮಾತುಗಳು ಕೇಳಿ ಬರುತ್ತಿವೆ. ಯಾವುದೇ ಸರ್ಕಾರದ ನೀತಿ ಜನರ ಸಾಮಾನ್ಯರಿಗೆ ತೊಂದರೆ ಉಂಟು ಮಾಡಿ ಇಕ್ಕಟ್ಟಿನಲ್ಲಿ ಸಿಕ್ಕಿಸ ಬಾರದು. ಈ ಸಂದರ್ಭದಲ್ಲಿ ಸರ್ಕಾರ ಹೇಗೆ ನೊಂದ ಉಪನ್ಯಾಸಕರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸವನ್ನು ಮಾಡುತ್ತದೆನ್ನುವುದನ್ನು ಕಾದು ನೋಡಬೇಕಾಗಿದೆ.

Related Articles

Back to top button
error: Content is protected !!